*ಪರುಷ ಕಟ್ಟೆಯ ಮೇಲೆ ದನ (ನಂದಿ) ದ ವಿಗ್ರಹ ಇಡಲು ಪುರೋಹಿತಶಾಹಿಗಳ ಹುನ್ನಾರ*

*ಪರುಷ ಕಟ್ಟೆಯ ಮೇಲೆ ದನ (ನಂದಿ) ದ ವಿಗ್ರಹ ಇಡಲು ಪುರೋಹಿತಶಾಹಿಗಳ ಹುನ್ನಾರ*

~ಡಾ. ಜೆ ಎಸ್ ಪಾಟೀಲ.

ಬಸವಣ್ಣನವರು ಮತ್ತು ಶರಣರ ಚಿಂತನೆಗಳೆಂದರೆ ಪುರೋಹಿತಶಾಹಿಗಳಿಗೆ ಅನವರತ ತಿವಿಯುವ ಚೂರಿ ಇದ್ದಂತೆ. ಉತ್ಪಾದಕ ವರ್ಗದ ತಳ ಸಮುದಾಯದ ಜನರು ಕಟ್ಟಿದ ಲಿಂಗಾಯತ ಧರ್ಮದಲ್ಲಿ ಒಳಹೊಕ್ಕು ಬ್ರಾಹ್ಮಣ್ಯದ ಆಚರಣೆಗಳಿಂದ ಕಲುಶಿತಗೊಳಿಸಿದವರು ಆಂಧ್ರ ಮೂಲದ ವೀರಶೈವ ಆರಾಧ್ಯರು. ಈ ಆರಾಧ್ಯ ಬ್ರಾಹ್ಮಣರು ಅನುತ್ಪಾದಕ ಪರಾವಲಂಬಿ ಪಂಗಡಕ್ಕೆ ಸೇರಿದವರು. ಬಸವೋತ್ತರ ಯುಗದಲ್ಲಿ ಬ್ರಾಹ್ಮಣ ಶೈಲಿಯಲ್ಲಿ ಬಸವ ಪುರಾಣಗಳು ಬರೆದು ಬಸವಣ್ಣನವರ ಚರಿತ್ರೆ ಮತ್ತು ಅವರ ಚಿಂತನೆಗಳಿಗೆ ಬ್ರಾಹ್ಮಣ್ಯದ ಸೋಂಕು ತಗಲಿಸುವ ಕಾರ್ಯ ಮಾಡಿದವರು ಇದೇ ಆರಾಧ್ಯ ಬ್ರಾಹ್ಮಣರು.

ಬಸವಣ್ಣನವರು ಮತ್ತು ಅವರ ಜೀವಪರ ಚಿಂತನೆಗಳನ್ನು ಸದಾ ದ್ವೇಷಿಸುವ ಈ ಪರಾವಲಂಬಿಗಳು ಬಸವಣ್ಣನವರ ಭಾವಚಿತ್ರ ˌ ಸ್ಮಾರಕಗಳನ್ನು ತಮ್ಮ ಉಪಜೀವನಕ್ಕೆ ಊರುಗೋಲಾಗಿಸಿಕೊಂಡಿರುವುದು ಅವುಗಳ ಲಜ್ಜಾಹೀನ ಬದುಕಿಗೆ ಸಾಕ್ಷಿಯಾಗಿದೆ. ಬಸವಣ್ಣನವರನ್ನು ಎಂದೆಂದಿಗು ದ್ವೇಷಿಸುವ ಈ ವೀರಶೈವರು ಕೂಡಲಸಂಗಮದಲ್ಲಿ ಬಸವಣ್ಣನವರ ಐಕ್ಯ ಮಂಟಪದ ಮೇಲೆ ಧಾರ್ಮಿಕ ದಂಧೆ ಮಾಡಿಕೊಂಡಿದ್ದರು. ಸ್ಥಾವರ ಪೂಜೆಯನ್ನು ದಿಕ್ಕರಿಸಿದ್ದ ಬಸವಣ್ಣನವರ ಸಮಾಧಿಯನ್ನೇ ಸ್ಥಾವರವಾಗಿಸಿ ಬದುಕುತ್ತಿದ್ದ ವೀರಶೈವ ಆರಾಧ್ಯರಿಂದ ಬಸವಣ್ಣನವರ ಐಕ್ಯಮಂಟಪ ಮುಕ್ತಗೊಳಿಸಲು ಎಂಟು ಶತಮಾನಗಳೆ ಸಂದವು.

ಬಸವಕಲ್ಯಾಣದಲ್ಲಿ ಐತಿಹಾಸಿಕ ಪರುಷ ಕಟ್ಟೆಯ ಮೇಲೆ ಧರ್ಮಗುರು ಬಸವಣ್ಣನವರು ಪ್ರತಿದಿನ ಅರಮನೆಗೆ ಹೋಗುವ ಸಂದರ್ಭದಲ್ಲಿ ಕುಳಿತು ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾಗುತ್ತಿದ್ದರು. ಪತೀತರನ್ನು ಪಾವನರನ್ನಾಗಿಸುವ ಮತ್ತು ಜನರ ದೈನಂದಿನ ಸಮಸ್ಯೆಗಳಿಗೆ ಧ್ವನಿಯಾಗುವ ಮಾಧ್ಯಮದಂತೆ ಅಂದು ಬಸವಣ್ಣ ಪರುಷ ಕಟ್ಟೆಯನ್ನು ಬಳಸುತ್ತಿದ್ದರು. ಕಲ್ಯಾಣದ ರಕ್ತಪಾತದ ನಂತರ ಕಲ್ಯಾಣದ ಪರುಷ ಕಟ್ಟೆ ಬಸವಣ್ಣನವರ ಸ್ಮರಣಾರ್ಥವಾಗಿ ಹಾಗು ಐತಿಹಾಸಾಕ ಕುರುಹಾಗಿ ೧೯೪೮ ರ ವರೆಗೆ ತನ್ನ ತನವನ್ನು ಉಳಿಸಿಕೊಂಡು ಬಂದಿತ್ತು.

೧೯೪೮ ರ ನಂತರ ಆ ಕಟ್ಟೆಯ ಮೇಲೆ ವೀರಶೈವ ಆರಾಧ್ಯ ಬ್ರಾಹ್ಮಣ ಪುರೋಹಿತಶಾಹಿಗಳು ನಂದಿ ವಿಗ್ರಹವನ್ನು ಸ್ಥಾಪಿಸಿ ಪೂಜೆ ಮಾಡುತ್ತ ಕಾಣಿಕೆ ಡಬ್ಬಿಯನ್ನು ಕಟ್ಟೆಯ ಮೇಲಿಟ್ಟು ಹೊಟ್ಟೆ ಹೊರೆಯಲಾರಂಭಿಸಿದರು. ಈ ಆರಾಧ್ಯ ವೀರಶೈವರು ಯಾವ ಬಸವಣ್ಣನವರನ್ನು ಸದಾ ದ್ವೇಷಿಸಿದರೊ ಅದೇ ಬಸವಣ್ಣನವರ ಸ್ಮಾರಕವನ್ನು ಹೊಟ್ಟೆ ಹೊರೆಯುವ ಸಾಧನವಾಗಿಸಿಕೊಂಡದ್ದಷ್ಟೆ ಅಲ್ಲದೆ ಪರುಷಕಟ್ಟೆಯ ಐತಿಹಾಸಿಕ ಮಹತ್ವಕ್ಕೆ ಚ್ಯುತಿ ತಂದರು. ಬಸವಣ್ಣನವರು ಕುಳಿತ ಕಟ್ಟೆಯ ಮೇಲೆ ಆಗಮಿಕ ಶೈವರು ಪೂಜಿಸುವ ದನ(ನಂದಿ)ಯ ವಿಗ್ರಹವನ್ನಿಟ್ಟು ಆ ಸ್ಥಳವನ್ನು ಅಪವಿತ್ರಗೊಳಿಸಿದರು.

ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರವು ಈಗ ಆ ಐತಿಹಾಸಿಕ ಕಟ್ಟೆಯನ್ನು ಅಭಿವೃದ್ಧಿ ಮಾಡುತ್ತಿದ್ದು ಅದರ ಸುತ್ತಮುತ್ತ ವಾಸಿಸುತ್ತಿದ್ದ ಮುಸ್ಲಿಮ್ ಬಾಂಧವರ ಕಟ್ಟಡಗಳನ್ನು ಮಾತುಕತೆಯ ಮೂಲಕ ತೆರವುಗೊಳಿಸಿದೆ. ಅದರ ಹಿನ್ನೆಲೆಯನ್ನು ಗಮನದಲ್ಲಿರಿಸಿಕೊಂಡು ಪರುಷಕಟ್ಟೆಯನ್ನು ಒಂದು ಐತಿಹಾಸಿಕ ಮಹತ್ವದ ತಾಣವಾಗಿಸಲು ಅಭಿವೃದ್ಧಿ ಪಡಿಸುವ ಸದುದ್ದೇಶ ಪ್ರಾಧಿಕಾರಕ್ಕಿದೆ. ನಾಲ್ಕಾರು ದಿನಗಳ ಹಿಂದೆ ಆ ಐತಿಹಾಸಿಕ ಪರುಷ ಕಟ್ಟೆಯ ಮೇಲಿಟ್ಟಿದ್ದ ದನ (ನಂದಿ) ದ ವಿಗ್ರಹವನ್ನು ಅಭಿವೃದ್ಧಿ ಪ್ರಾಧಿಕಾರ ತೆರವುಗೊಳಿಸಿದೆ. ವೀರಶೈವ ಆರಾಧ್ಯ ಪುರೋಹಿತಶಾಹಿ ಪುಂಡರು ಪ್ರಾಧಿಕಾರದ ಈ ಐತಿಹಾಸಿಕ ಕ್ರಮವನ್ನು ವಿರೋಧಿಸಿ ಸಂಬಂಧಿಸಿದವರ ಮೇಲೆ ಗೂಂಡಾವರ್ತನೆ ತೋರಿದ್ದಲ್ಲದೆ ಮತ್ತೆ ಪರುಷ ಕಟ್ಟೆಯ ಮೇಲೆ ಆ ವಿಗ್ರಹವನ್ನು ತಂದಿಡಲು ಹುನ್ನಾರ ಮಾಡುತ್ತಿದ್ದಾರೆ.

ಬಸವಣ್ಣನವರು ಕುಳಿತ ಐತಿಹಾಸಿಕ ಸ್ಮಾರಕವಾಗಿರುವ ಪರುಷ ಕಟ್ಟೆಗೂ ಹಿಂದೂ ಮೂಲಭೂತವಾದಿಗಳು ಹಾಗು ವೀರಶೈವ ಆಗಮಿಕರು ಆರಾಧಿಸುವ ದನ (ನಂದಿ) ದ ವಿಗ್ರಹಕ್ಕೂ ಯಾವುದೇ ಸಂಬಂಧವಿಲ್ಲ. ಬಸವಣ್ಣ ಸ್ಥಾಪಿಸಿರುವ ಲಿಂಗಾಯತ ಧರ್ಮದ ಅನುಯಾಯಿಗಳು ಹಿಂದೂಗಳಲ್ಲವಾದ್ದರಿಂದ ಆ ನಂದಿ ವಿಗ್ರಹಕ್ಕೂ ಪರುಷ ಕಟ್ಟೆಗು ಹಾಗು ಲಿಂಗಾಯತ ಧರ್ಮಿಯರಿಗು ಯಾವುದೇ ಸಂಬಂಧವಿಲ್ಲ. ಆದರೂ ಬಸವಣ್ಣನವರಿಗೆ ಸಂಬಂಧಿಸಿದ ಆ ಐತಿಹಾಸಿಕ ಪರುಷ ಕಟ್ಟೆಯ ಮೇಲೆ ಪುರಾಣ ಕಲ್ಪಿತ ದನ(ನಂದಿ) ದ ವಿಗ್ರಹ ಇರಬೇಕೆಂದು ಬಸವದ್ರೋಹಿಗಳು ಮತ್ತು ಹಿಂಗಾಯತ ಧರ್ಮದ್ರೋಹಿಗಳ ಪುಂಡಾಟಿಕೆ ಮುಂದುವರೆದಿದೆ.

ನಾಲ್ಕಾರು ದಿನಗಳ ಹಿಂದೆ ಆ ನಂದಿ ವಿಗ್ರಹ ತೆರವುಗೊಳಿಸಿದಾಗ ಸ್ಥಳಿಯ ಶಾಸಕ ಮತ್ತು ಆತನ ಹಿಂದುತ್ವವಾದಿ ಪಟಾಲಮ್ ಅಲ್ಲಿ ಪುಂಡಾಟಿಕೆ ಮಾಡಿತ್ತು. ಸಂಬಂಧಿಸಿದವರಿಗೆ ಹೆದರಿಸುವˌ ಅನಾಗರಿಕವಾಗಿ ನಿಂದಿಸುವ ಗೂಂಡಾ ವರ್ತನೆ ತೋರಿತ್ತು. ವೀರಶೈವ ಮತ್ತು ಹಿಂದೂ ಮೂಲಭೂತವಾದಿ ಗೂಂಡಾಗಳ ಈ ಪುಂಡಾಟಿಕೆಯ ವಿರುದ್ಧ ಬಸವಪ್ರಜ್ಞೆಯುಳ್ಳ ಮಠಗಳು ಮತ್ತು ಸಂಘ-ಸಂಸ್ಥೆಗಳು ಬೀದಿಗಿಳಿದು ಹೋರಾಡುವ ಅಗತ್ಯವಿದೆ. ಪರುಷ ಕಟ್ಟೆ ಅಭಿವೃದ್ಧಿ ಹೊಂದಿದ ನಂತರ ಮತ್ತೆ ಆ ದನದ (ನಂದಿ) ವಿಗ್ರಹ ಪರುಷಕಟ್ಟೆ ಏರದಂತೆ ಜಿಲ್ಲಾಡಳಿತ ಜಾಗೃತೆ ವಹಿಸಬೇಕು ಮತ್ತು ಅದನ್ನು ಒಂದು ಐತಿಹಾಸಿಕ ಸ್ಮಾರಕವಾಗಿ ರಕ್ಷಿಸಬೇಕೆ ಹೊರತು ಮೈಗಳ್ಳರ ಪೂಜಾ ಕೇಂದ್ರವಾಗಿಸಬಾರದು.

ಪರುಷಕಟ್ಟೆಯ ಮೇಲೆ ಆ ದನ(ನಂದಿ) ದ ವಿಗ್ರಹವನ್ನು ಮರು ಸ್ಥಾಪಿಸದಂತೆ ಜಿಲ್ಲಾಡಳಿತ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮೇಲೆ ಒತ್ತಡ ಹೇರುವ ಜವಾಬ್ಧಾರಿ ನಾಡಿನ ಬಸವಪ್ರಜ್ಞೆಯ ವಿರಕ್ತ ಮಠಗಳ ಮೇಲಿದೆ. ಬಸವಣ್ಣನವರ ಹೆಸರಿನಲ್ಲಿ ಬದುಕು ಕಟ್ಟಿಕೊಂಡಿರುವ ವಿರಕ್ತ ಪರಂಪರೆಯ ಪಠಗಳು ಬಸವಣ್ಣನವರ ಋಣವನ್ನು ತೀರಿಸುವ ಮಹತ್ತರ ಕಾರ್ಯಕ್ಕೆ ಅಣಿಯಾಗಬೇಕಿದೆ. ಆ ಮಠಗಳ ಬೆಂಬಲಕ್ಕೆ ಬಸವಾನುಯಾಯಿಗಳು ಸದಾ ನಿಲ್ಲುಬಲ್ಲರು. ಇದನ್ನು ಹೀಗೆ ಬಿಟ್ಟರೆ ನಾಳೆ ಅನುಭವ ಮಂಟಪದಲ್ಲೂ ಈ ಪುಂಡರು ಪೂಜಾ-ಪಾಠ ಮಾಡುತ್ತ ತಮ್ಮ ಪರಾವಲಂಬಿ ಬದುಕಿಗೆ ಆಸರೆ ಹುಡುಕಬಲ್ಲರು.

~ಡಾ. ಜೆ ಎಸ್ ಪಾಟೀಲ.

4 thoughts on “*ಪರುಷ ಕಟ್ಟೆಯ ಮೇಲೆ ದನ (ನಂದಿ) ದ ವಿಗ್ರಹ ಇಡಲು ಪುರೋಹಿತಶಾಹಿಗಳ ಹುನ್ನಾರ*

  1. ಪರುಷಕಟ್ಟೆಯ ಮೂಲ ಆಶಯದಂತೆ ಬಸವಣ್ಣ ಬಳಸಿದ್ದ ರೀತಿಯನ್ನು ಬಿಂಬಿಸಬೇಕು…. ಬಸವಣ್ಣನ ನೈಜ ಜೀವನ ಬಿಂಬಿಸಬೇಕು…. ಯಾವುದೇ ಇತರೆ ರೀತಿಯ ಅಪಸವ್ಯಗಳಿಗೆ ಆಸ್ಪದ ನೀಡಬಾರದು….

  2. ನಾಡಿನ ಪ್ರಜ್ಞಾವಂತ ಬಸವ ಅನುಯಾಯಿಗಳು ಒಂದೆಡೆ ಸೇರಿ ಬೃಹತ್ ಹೋರಾಟ ಮಾಡಬೇಕಾಗಿದೆ. ಲಿಂಗಾಯತ ಧರ್ಮದಲ್ಲಿ ವೀರಶೈವ ಎನ್ನುವವರು ಬೇರೆಳೆಣಿಕೆಯಷ್ಟು ಇದ್ದಾರೆ. ಆದರೆ ಇಡೀ ಲಿಂಗಾಯತ ಧರ್ಮವನ್ನೇ ಕುಲಗೇಡಿಸಿದ್ದಾರೆ. ಇವರಿಗೊಂದು ಎಚ್ಚರಿಕೆ ಕೊಟ್ಟು ಪರುಷ ಕಟ್ಟೆ ಮೇಲೆ ಇವರನ್ನು ಹತ್ತದಂತೆ ಮಾಡಬೇಕು.

  3. ಈಗಾಗಲೇ ನಿರ್ಧರಿಸಿದಂತೆ ಪುರುಷ ಕಟ್ಟೆಯ ಮೇಲೆ ಮಾನವತವಾದಿ ಜಗಜ್ಯೋತಿ ಬಸವೇಶ್ವರರ ಪುತ್ತಳಿಯನ್ನ ನಿರ್ಮಿಸುವುದರ ಮೂಲಕ ಮುಂದಿನ ಪೀಳಿಗೆಗೆ ಸ್ಮಾರಕವಾಗಿ ಇಡುವ ಅವಶ್ಯಕತೆ ಮತ್ತು ಅನಿವಾರ್ಯತೆ ಇದೆ. ಆದ್ದರಿಂದ ನಾವೆಲ್ಲ ಬಸವ ಅಭಿಮಾನಿಗಳು ಈ ಕೆಲಸದಲ್ಲಿ ಕೈಜೋಡಿಸಬೇಕಾಗಿದೆ
    ಜೈ ಬಸವೇಶ್ವರ
    ಜೈ ಲಿಂಗಾಯತ

  4. ಬಸವಣ್ಣನವರ ಜಾಗದಲ್ಲಿ ಬಸವಣ್ಣನವರ ವಿಗ್ರಹ ಮಾತ್ರ ಇರಬೇಕು. ದನದ ವಿಗ್ರಹವಲ್ಲ. ಅಲ್ಲಿ ಏನು ಇರಬೇಕು ಎಂದು ತೀರ್ಮಾನಿಸುವುದು ಬಸವಪರ ಮಠಗಳು ಮತ್ತು ಬಸವಪರ ಸಂಘಟನೆಗಳು. ಈ ಬಗ್ಗೆ ಸರಕಾರ ಅಥವಾ ಬೇರೆ ಯಾರು ಮಧ್ಯಪ್ರದೇಶ ಮಾಡಬಾರದು. ಮದ್ಯ ಪ್ರವೇಶಿಸಿ ಅಧಿವೇಶನಕ್ಕೆ ತೊಂದರೆ ಕೊಟ್ಟಿದ್ದನ್ನು ಲಿಂಗಾಯತರು ಮರೆತಿಲ್ಲ. ಹಿರಿಯರ ಕೋರಿಕೆ ಮೇಲೆ ಅಂದು ಸುಮ್ಮನಿರಬೇಕಾಯಿತು. ಲಿಗಾಯತರ ಇತಿಹಾಸಕ್ಕೆಅಡ್ಡಿಪಡಿಸಲು ಪ್ರಯತ್ನಿಸಿದರೆ ಇನ್ನು ಲಿಂಗಾಯತ ಸಮ್ಮನೆ ಕೂರುವುದಿಲ್ಲ.

Leave a Reply

Your email address will not be published. Required fields are marked *

error: Content is protected !!