*ಜಾಗತಿಕ ಲಿಂಗಾಯತ ಮಹಾಸಭೆಗೆ ಅಮರಿಕೊಂಡಿರುವ ಅವಕಾಶವಾದಿ ರಾಜಕಾರಣಿ,ಪಟ್ಟಭದ್ರ ಮಠಾಧೀಶರನ್ನು ದೂರವಿಟ್ಟು ಸಮಾವೇಶ ನಡೆಸಬೇಕು*

*ಜಾಗತಿಕ ಲಿಂಗಾಯತ ಮಹಾಸಭೆಗೆ ಅಮರಿಕೊಂಡಿರುವ ಅವಕಾಶವಾದಿ ರಾಜಕಾರಣಿ,ಪಟ್ಟಭದ್ರ ಮಠಾಧೀಶರನ್ನು ದೂರವಿಟ್ಟು ಸಮಾವೇಶ ನಡೆಸಬೇಕು*

ಜಾಗತಿಕ ಲಿಂಗಾಯತ ಮಹಾಸಭೆಯಿಂದ ಆಯೋಜಿಸಲು ತೀರ್ಮಾನಿಸಲಾಗಿದ್ದ ಸಮಾವೇಶಗಳ ಕುರಿತು ಇದೀಗ ಚರ್ಚೆ ನಡೆದಿದೆ. ಬಹುತೇಕ ಜನ ಲಿಂಗಾಯತ ಜನ ಸಮುದಾಯದ ಸಮಾವೇಶಗಳು ಕರ್ನಾಟಕದ ತುಂಬ ಅಲ್ಲಲ್ಲಿ ನಡೆಯಲೆಬೇಕು ಎಂಬ ಅಭಿಪ್ಸೆ ಉಳ್ಳವರಾಗಿದ್ದಾರೆ. ಚರ್ಚೆ, ಸಮಾವೇಶ, ವಿಚಾರ ಸಂಕಿರಣಗಳಿಂದ ಮಾತ್ರ ಬಸವಾದಿ ಶರಣರ ತತ್ವಗಳನ್ನು ಜನ ಮಾನಸಕ್ಕೆ ತಲುಪಿಸಲು ಸಾಧ್ಯ ಎಂಬ ಬಲವಾದ ನಂಬಿಕೆಯೊಂದಿದೆ. ಇದು ಸತ್ಯಕ್ಕೆ ಹತ್ತಿರವಾದ ಸಂಗತಿಯಾಗಿದೆ. ಚಟುವಟಿಕೆಗಳೆ ಇಲ್ಲದ ,ಚಿಂತನೆ ನಡೆಸದ ವಿಚಾರವೊಂದು ಈ ನೆಲದಲ್ಲಿ ಬೆಳೆಯಲು ಸಾಧ್ಯವಿಲ್ಲ.

ಈ ಆಲೋಚನೆಗಳಿಗೆ ವಿರುದ್ಧವಾಗಿ ಹಲವು ಪಟ್ಟಭದ್ರರು,ಮಠಾಧೀಶರು ಸಂಯಮದ ವಿರೋಧ ವ್ಯಕ್ತ ಪಡಿಸಿದ್ದಾರೆ. ಬಹುಶಃ ಇಂಥ ಮಠಾಧೀಶರ ಬೆನ್ನ ಹಿಂದೆ ಜಾಗತಿಕ ಲಿಂಗಾಯತ ಮಹಾಸಭೆಯ ಕೆಲವು ರಾಜಕಾರಣಿಗಳೂ ಇದ್ದಾರೆ. ಚುನಾವಣೆಯ ಹೊಸ್ತಿಲಲ್ಲಿ ನಿಂತಿರುವಾಗ ಲಿಂಗಾಯತರ ಸಮಾವೇಶ ಮಾಡುವುದು, ಅದನ್ನು ವಿರೋಧ ಪಕ್ಷದವರು ರಾಜಕೀಯಕ್ಕೆ ಬಳಸುವುದರಿಂದ ಈಗ ಕೊಂಚ ಮಟ್ಟಿಗೆ ವಿಶ್ವಾಂತಿಯಲ್ಲಿರೋಣ ಎಂಬುದು ಅವರ ಅಂಬೋಣ. ನಿಜಕ್ಕೂ ಬಸವಾದಿ ಶರಣರು ಕಟ್ಟಿದ ಲಿಂಗಾಯತ ಧರ್ಮ ಇಂಥ ಮೀನಮೇಷ ಮಾಡುವ ,ಸೋಗಲಾಡಿ ಮಠಾಧೀಶರಿಂದ ,ಸೊಂಬೇರಿ ರಾಜಕಾರಣಿಗಳಿಂದ ಆವೃತವಾದುದಲ್ಲ.

ಯಾವ ರಾಜಕಾರಣಿಗಳಿಗೆ ಜಾಗತಿಕ ಲಿಂಗಾಯತ ಮಹಾಸಭೆಯ ಉದ್ದೇಶಗಳನ್ನು, ಆ ಸಮುದಾಯದ ತತ್ವಗಳನ್ನು ಪರಿಪಾಲೊಸಲು ಸಾಧ್ಯವಿಲ್ಲವೋ ಅಂಥ ಸಂಘಟನೆಯನ್ನು ತಾವಾಗಿಯೆ ತೊರೆದು ಹೋಗಬೇಕು. ಹಿಂದೆ ನಾವು ಜಾಗತಿಕ ಲಿಂಗಾಯತ ಮಹಾಸಭೆ ಕಟ್ಟುವಲ್ಲಿ ಪರಿಶ್ರಮ ಪಟ್ಟಿದ್ದೇವೆಂದು ಅಲ್ಲಿಯೆ ಗೂಟ ಹೊಡಕೊಂಡು ಕೂಡುವುದು ಸರಿಯಲ್ಲ.

ಶರಣರ ಚಿಂತನೆಗಳನ್ನು ಜನತೆಗೆ ಮುಟ್ಟಿಸದ ಮಠಾಧೀಶ, ಲಿಂಗಾಯತ ಧರ್ಮಕ್ಕೆ ಅಲ್ಪ ಸಂಖ್ಯಾತ ಸ್ಥಾನ ಮಾನ ಕೊಡಿಸಲು ಹೋರಾಟ ಮಾಡದ ರಾಜಕಾರಣಿ ಸಂಘಟನೆಯಲ್ಲಿ ಇದ್ದರೆಷ್ಟು, ಹೋದರೆಷ್ಟು!?

ಆಳುವ ಸರಕಾರದ ಹಂಗಿನಲ್ಲಿರುವ ಮಠಾಧೀಶರು ಎಂದಿಗೂ ಸ್ಪಷ್ಟವಾದ ಗುರಿಗಮ್ಯವನ್ನು ಹೊಂದಿರಲಾರರು. ಹಾಗೆಯೆ ಸ್ವಾರ್ಥ ಲಾಲಸೆಯಲ್ಲಿ ಮುಳುಗಿರುವ ರಾಜಕಾರಣಿ ತನ್ನ ರಾಜಕೀಯ ಅಸ್ತಿತ್ವಬಿಟ್ಟು ಯೋಚಿಸಲಾರ. ಇದು ಕಟುವಾದ ಸತ್ಯ.

ಆದ್ದರಿಂದ ಜನ ಬೆಂಬಲದ ಮೂಲಕ ಡಾ.ಎಸ್.ಎಂ.ಜಾಮದಾರ ಹಾಗೂ ಟೀಮ್ ಮುಂದೆ ನಿಂತುಕೊಂಡು ಬೃಹತ್ ಸಮಾವೇಶಗಳನ್ನು ನಡೆಸಬೇಕು. ಜಾಗತಿಕ ಲಿಂಗಾಯತ ಮಹಾಸಭೆಯ ಚಿಂತನೆಗಳನ್ನು ಜನಮಾನಸದಲ್ಲಿ ಬಿತ್ತಬೇಕು. ಜನ ಎದ್ದು ನಿಂತರೆ ಸರಕಾರದ ಕಣ್ಣು ಕಿವಿ ತಂತಾನೆ ತೆರೆದುಕೊಳ್ಳುತ್ತವೆ.

ಪಕ್ಷ ರಾಜಕೀಯದ ರಾಜಕಾರಣಿ, ಚಡ್ಡಿ ತೊಟ್ಟುಕೊಂಡು ಹಿಂದುತ್ವದ ಅಮಲಿನಲ್ಲಿರುವ ಮಠಾಧೀಶರು ಎಂದಿಗೂ ಜಾಗತಿಕ ಲಿಂಗಾಯತ ಮಹಾಸಭೆಗೆ ಕುತ್ತು. ಇವರೀರ್ವರಿಂದ ಯಾವ ಮಿಣಿಯೂ ಹರಿಯಲಾರದು. ಯಾವುದೆ ಪಕ್ಷದ ರಾಜಕಾರಣಿಯಾಗಿದ್ದರೂ ಆತನನ್ನು ಮಹಾಸಭೆ ದೂರ ಇಡಬೇಕು. ಮಠಾಧೀಶ ಎಷ್ಟೆ ಪ್ರಗತಿಪರನಾಗಿದ್ದರೂ ಆತನ ಮೇಲೊಂದು ಗುಮಾನಿ ಇಟ್ಟುಕೊಂಡು ಮಹಾಸಭೆ ನಡೆಸಬೇಕು.

ಡಾ.ಎಸ್.ಎಂ.ಜಾಮದಾರ ಒಬ್ಬ ಉತ್ತಮ ಸಂಪನ್ಮೂಲ ವ್ಯಕ್ತಿ. ಅಪಾರವಾದ ಜ್ಞಾನ ಭಂಡಾರ ಅವರಲ್ಲಿದೆ. ಆದರೆ ಅವರೊಬ್ಬ ಸಂಘಟಕರಲ್ಲ.‌ಇದನ್ನು ನಾವೆಲ್ಲ ಮನಗಾಣಬೇಕು. ಜಾಗತಿಕ ಲಿಂಗಾಯತ ಮಹಾಸಭೆ ರಾಜ್ಯದಲ್ಲಿ ಮತ್ತೊಮ್ಮೆ ಮಗದೊಮ್ಮೆ ತನ್ನ ಕಹಳೆ ಮೊಳಗಿಸಬೇಕು. ಆಗ ತಂತಾನೆ ಚಡ್ಡಿಗಳು ಒದ್ದೆ ಆಗುತ್ತವೆ. ಜನ ಸಾಮಾನ್ಯರಲ್ಲಿ ಪ್ರಜ್ಞೆ ಮೂಡುತ್ತವೆ. ಈ ನೆಲದಲ್ಲಿ ಮತ್ತೆ ಶರಣ ಚಿಂತನೆಗಳು ಉಸಿರಾಡುತ್ತವೆ, ಸಾಕಷ್ಟು ಜನ ಯುವ ಜನತೆ ಧರ್ಮದ ಅಮಲಿನಿಂದ ಹೊರಬರುತ್ತಾರೆ‌.


ನಮ್ಮ ರಾಜ್ಯದಲ್ಲಿ ಮಠಾಧೀಶರ ಒಕ್ಕೂಟವೊಂದು ಅಸ್ತಿತ್ವದಲ್ಲಿ ಇದೆ. ಈ ಸಂಘಟನೆಯ ಅಧ್ಯಕ್ಷರಾಗಿ ಭಾಲ್ಕಿ ಡಾ.ಬಸವಲಿಂಗ ಪಟ್ಟದ್ದೇವರು , ಗೌರವ ಅಧ್ಯಕ್ಷ ರಾಗಿ   ಗದುಗಿನ ಡಾ.ಸಿದ್ದರಾಮ ತೋಂಟದಾರ್ಯರು ಇದ್ದಾರೆ. ಜಾಗತಿಕ ಲಿಂಗಾಯತ ಮಹಾಸಭೆಗೆ ಕಾಯಕಲ್ಪ ಒದಗಿಸಬೇಕಾದ ಮಹಾನಿಯರು ಸುಮ್ಮನೆ ಕುಳಿತಿರುವುದು ಸರಿಅನಿಸುತ್ತಿಲ್ಲ. ಇವರು ಮುಂದೆ ನಿಂತು ಜಾಗತಿಕ ಲಿಂಗಾಯತ ಮಹಾಸಭೆಗೆ ಕಾಯಕಲ್ಪ ನೀಡಬೇಕು.


೦ ವಿಶ್ವಾರಾಧ್ಯ ಸತ್ಯಂಪೇಟೆ


Sir. Your argument is good. It is nonuse to keep Swamijis and. Politicians in this attempt to organise huge rally. There is no need to blame them. Both have their own vested Interests. Swamijis cannot go against there administrators. and politicians cannot go against their vote bank. Let leave them. But conference is a must. Otherwise we will loose our fight. Keeping election in view is important. We have to fight against the present anti-Basava RSS government. We support the JLM’ proposed conference. We have strengthen the hands of Dr. S. M. Jamdar. If we lose him, our mission will not go anywhere.

Dr.T.R.Chandrashekar b,lur

3 thoughts on “*ಜಾಗತಿಕ ಲಿಂಗಾಯತ ಮಹಾಸಭೆಗೆ ಅಮರಿಕೊಂಡಿರುವ ಅವಕಾಶವಾದಿ ರಾಜಕಾರಣಿ,ಪಟ್ಟಭದ್ರ ಮಠಾಧೀಶರನ್ನು ದೂರವಿಟ್ಟು ಸಮಾವೇಶ ನಡೆಸಬೇಕು*

 1. ಬಹಳ ಅರ್ಥಪೂರ್ಣವಾದ ಸಧ್ಯದ ಪರಿಸ್ತಿತಿಯಲ್ಲಿ ಅವಶ್ಯಕವಾಗಿ ಮಾಡಬೇಕಾದ ಕೆಲಸಗಳನ್ನು ಗಂಭೀರವಾಗಿ ಯೋಚಿಸಿ ತಿಳಿಸಿದ್ದೀರಿ…
  ಶರಣು ಶರಣಾರ್ಥಿ
  ಧನ್ಯವಾದಗಳೊಂದಿಗೆ….
  🙏🪔📶💯🙏🙏

 2. (ಮೊದಲಿಗೇ ಹೇಳ್ಬಿಡ್ತೇನೆ… ಭಾಷೆ ಬಳಸಿ ರೋದ್ರಲ್ಲಿ ತಪ್ಪಿದ್ರೆ ಕ್ಷಮ್ಸಿ)

  https://youtu.be/annciaDyS2Q

  ಖತರ್ನಾಕ್ ಕಳ್ ನನ್ ಮಕ್ಳು ಕಣ್ರೀ..ಈ ಪಂಚ ಪೀಠದವ್ರು …! ಈ ಬೋಸುಡಿಗಳ್ಗೆ ಚಿನ್ನದ್ ಕಿ ರಾಟಾನೇ ಬೇಕು ತಲೆಗೆ… ಚಿನ್ನಲೇಪಿತ ರುದ್ರಾಕ್ಷಿ ಸರ … ಮಿರ್ಮಿ ರಾ ಮಿಂಚೋ ವಸ್ತ್ರ ಬೇರೆ ಮೈ ಮೇಲೆ… ಬಲಗೈ ಮೇಲೆತ್ತೊಂಡು ಶಿವನ್ ಫೋಸ್ ಕೊಟ್ಕೊಂಡು. ಎಡಗೈ ನಲ್ನೊಂದ್ ಕೋಲು ಅದಕ್ಕೊಂದ್ ಅಲ್ಲಾಡ್ ದಿರೋ ಚಿಕ್ ಬಾವ್ಟಾ ನೇತಾ ಕೊಂಡು…. ಆಹಾ … ಎದುರ್ಗಿ ರೋ ಹೆಂಗೆಳೆಯರಿಂದ ಝಗಮಗಿಸೋ ಅಂಗೆ ತುಪ್ ದಾರ್ತಿ.. ಪಂಚಾರ್ತಿ ಮಾಡಿಸ್ಕೊಳ್ತಾ ಮತ್ತಿನಲ್ಲಿ ವಾಲಾಡ್ತಾ .. ತೇಲಾಡ್ತಾ ಮೈ ಮರೆತು ಪಲ್ಲಕ್ಕಿ ಅಡ್ಡೆ ಮೇಲೆ ಕುಳಿತು ಅಮಾಯಕ ಜನರ ಬುಜ ದ್ ಮೇಲೆ ಹೊತ್ಕೊಂಡು ಊರೆಲ್ಲಾ ಮೆರವಣಿಗೆ ಮಾಡಿ ಸ್ಕೊಳ್ತಿರೋ ಈ ಮುಂಡೇ ಮಕ್ಕಳು ಮಾಡಿರೋ ಹಲ್ಕಾ ಕೆಲ್ಸ ಎಂಥದ್ ಗೊತ್ತಾ…

  ರಾಘವಾಂಕನ ಮೂಲ ಸಿದ್ಧರಾಮ ಚರಿತ್ರೆ ನೇ ಕಂಪ್ಲೀಟ್ ತಮಗ್ ಬೇಕಾದಂಗೆ ಎಡಿಟ್ ಮಾಡ್ಕೊಂಡು ಕರ್ನಾಟಕದೊಳಗಾದ್ರೆ ತಿಕ ಬಾರಿಸ್ಕೋ ಬೇಕಾಗ್ತದೆ ಅಂತ ಮಹಾರಾಷ್ಟ್ರದ ಕೊಲ್ಹಾಪುರದ್ ತಮ್ಮ ದೇವಸ್ಥಾನ ದ್ ಮೂಲ್ಕ 1967, 2006 ಹೀಗೆ ಒಳೊಳ್ ಗೇ ಸಾವಿರಾರು ಪ್ರತಿ ಗಳ್ನ ಪ್ರಿಂಟಾಕ್ಸಿ ವೀರಶೈವರಿಗೆಲ್ಲಾ ಹಂಚ್ಕೊಂಡ್ ಬಂದು.. ನೀವೆಲ್ಲಾ ಇದನ್ನ ಓದ್ರಿ ಅಂತ ದ್ವೇಷ ಹರಡ್ತಿರೋ ಈ ಪಂಚ್ ಪೀಠದವ್ರು ನಿಜಕ್ಕೂ ಮುಂಡೇ ಮಕ್ಳು.. ಮಿಂಡ್ರಿಗ್ ಹುಟ್ ದೋರು ಕಣ್ರೀ ….!!!

  ಯಾಕ್ ಗೊತ್ತಾ… ಈ ಪುಸ್ತಕದ್ ಮೂಲ್ಕ ಹೆಂಗೆಂಗ್ ಪುಂಗಿ ಊದವ್ರೆ ಅಂದ್ರೆ … ಬಸವಣ್ಣ ವಚನಾನೇ ಬರ್ದಿಲ್ಲ… ಆಸ್ತಿ ಲಪಟಾಯಿಸೋಕೆ ಬಿಜ್ಜಳನ ಆಸ್ಥಾನ ಸೇರ್ದ… ತನ್ನ ಅಕ್ಕ ನಾಗಮ್ಮನ ಬಿಜ್ಜಳನ ಹತ್ರ ಬಿಟ್ಕೊಂಡ್ ವ್ಯಭಿಚಾರ ಮಾಡ್ತಿದ್ದ. – ಚನ್ನಬಸ್ವ ಇದರ್ ಫಲಾ ಕಣ್ರೀ.. ಶರಣರನ್ನ ಗುಡ್ಡೆ ಹಾಕ್ಕೊಂಡ್ ಸಂಸ್ಥಾನದ ಆ ಸ್ಥಿ ನೆಲ್ಲಾ ಕದೀತಿದ್ದ ಕಳ್ಳರ ಗುಂಪಿನ ನಾಯ್ಕ ಈ ಬಸವಣ್ಣ… ಇನ್ನು ಆ ಅಲ್ಲ ಮನೋ… ಸದಾ ಮಾಯೆ … ಮೋಹ.. ಕಾಮ ಲತೆ ಅಂತಾ ಯಾವಾಗ್ಲೂ ಸೆಕ್ಸ್ ನಲ್ಲೇ ಮುಳುಗ್ತಿದ್ದ..!! ಇನ್ನು ಅಕ್ಕ ಮಹಾದೇವಿ .. ಎಲ್ಲಾ ಬಿಚ್ಚಾಕಿ ಮೂರೂ ತೋರಿಸ್ಕೊಂಡ್ ಊರೆಲ್ಲಾ ತಿರುಗ್ತಿದ್ದೋಳು…!!! ಇನ್ನೂ ಏನೇನ್ ಬೇಕು ನಿಮ್ಗೆ ಈ ಪುಸ್ತಕದ್ ಮೂಲ್ಕ ಲಿಂಗಾಯತರ ಮೇಲೆ ಇದ್ ಬದ್ ವಿಷಾನೆಲ್ಲಾ ಕಾರ್ಕೊಂಡವ್ರೆ… ಅಂಗದ ಮೇಲೆ ಬಸವಣ್ಣನ ಇಷ್ಠ ಲಿಂಗ ಧರಿಸ್ಕೊಂಡಿರೋ ವೀರಶೈವರು ಎಲ್ಲಾ ಕಡೆ ಲಿಂಗಾಯ್ತರ ಮೇಲೆ ನಿರಂತರ ಅಪಪ್ರಚಾರ ಮಾಡ್ಕೊಂಡ್ ಬ ರೋ ಹಂಗ್ ಮಾಡವ್ರೆ…

  ತಾವು ಮಾತ್ರ ಇನ್ನು ಕೂಡ ತಮ್ಮ ಆ ದಿ ಗುರು ರೇಣುಕಪ್ಪ ನ ಅಪ್ಪ-ಅಮ್ಮ ಯಾರೋ ಗೊತ್ತಿಲ್ಲ.. ಹೆಸರು ತಿಳೀದು … ಆದ್ರೆ ಅವ್ನು 14ನೇ ಶತಮಾನದಲ್ಲಿ ಕೊಲ್ಲಿ ಪಾಕಿನಲ್ಲಿ ಲಿಂಗೋದ್ಭವ ನಾದ.. ಅರ್ಥಾತ್ ಕಲ್ಲಿನಿಂದ ಹುಟ್ದ.. ಹೀಗಂತ ಇದ್ದಕ್ಕಿದ್ದಂತೆ 16ನೇ ಶತಮಾನದಲ್ಲಿ ಮೂಡಿ ಬಂದ ಆ ಗಂತುಕ ಖೊಟ್ಟಿ ಗ್ರಂಥ ಸಿದ್ಧಾಂತ ಶಿಖಾಮಣಿ ನೇ ಹೇಳುತ್ತೆ… ಅದೇ ನಮ್ ಧರ್ಮ ಗ್ರಂಥ. – ವೀರಶೈವರು ತಿಳಿದು ಅದ್ರಲ್ ಹೇಳ್ದಂಗೆ ನಡ್ಕೋಬೇಕು… ಇನ್ನೂ ಏನೇನೋ ಫರ್ಮಾನು ಈ ಪಂಚ ಪೀಠದ ಮುಂಡೆ ಮಕ್ಳಿಂದ….!!

  ಈಗ 2017 ರಿಂದ ಜಾಗತಿಕ ಲಿಂಗಾಯತ ಮಹಾ ಸಭಾದ ವ್ರು ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಡಿ ಮ್ಕಾಂಡ್ ಮಾಡ್ತಿದ್ರೆ ಅದೆಂಗ್ ಆಯ್ತದೆ … ನಾವೂ ಇಷ್ಠ ಲಿಂಗ ಕಟ್ಕೊಂಡಿಲ್ವಾ … ನಮ್ ನೂ ಸೇರಿಸ್ಕೊಳಿ… ನಾವು ಒರಿಜಿನಲ್ ಆಗಿ ಶೈವರಿರಬಹುದು .. ಹಿಂದೂಗಳ ಒಂದ್ ಭಾಗ ಅನ್ನೋದು ನಿಜ… ಆದ್ರೆ ಪ್ರತ್ಯೇಕ ಧರ್ಮ ಕೊಡೋದಾದ್ರೆ ಲಿಂಗಾಯತ್ರು ನಾವು ಎಲ್ಲಾ ಒಂದೇ ಕಣ್ರಿ… ಯಾಕ್ ಮೊದಲಿದ್ ವೀರಶೈವ ಮಹಾಸಭಾ ಹೆಸರನ್ನ ಈ ಗ ವೀರಶೈವ ಲಿಂಗಾಯತ ಅಂತ ನಾವೇ ಛೇಂಜ್ ಮಾಡ್ಕೊಂಡಿಲ್ವಾ … ಕೂಡ್ಡು.. ಕೂಡ್ಡು… ಧರ್ಮ ಒಡೀಬಾರ್ದು … ಇನ್ನು ಏನೇನೋ ಈ ಹಲ್ಕಾ ಮುಂಡೇ ನನ್ ಮಕ್ಕಳು ಪಂಚ ಪೀಠ ದೋರ್ ವರಾತ…
  ಥೂ ಹಣೇ ಮೇಲ್ ಕುಂಕುಮ ಬಳ್ಕೊಂಡು ರಾಘವೇಂದ್ರ ಹೆಸರಿಟ್ಕೊಂಡು ನಾವೇ ಲಿಂಗಾಯತರ ಲೀಡರ್ ಗಳು.. ಅವ್ರ ಓಟೆಲ್ಲಾ ನಮ್ದೇ… ನಮಗೇ .. ಅಂತ ಇದು ವರೆಗೂ ಧರ್ಮ ಮಾನ್ಯತೆ ವಿಷಯದಲ್ಲಿ ಟೋಪಿ ಹಾಕ್ತಾನೇ ಬಂದಿರೋ ಚಡ್ಡಿ ಗುಲಾಮ ರೇ.. ಇ ವ್ ರೊಂದಿಗೆ ತಮ್ ರಾಜಕೀಯದ ಬೇಳೆ ಬೇಯಿಸ್ಕೊಳ್ಳೋಕೆ ಕಾಯ್ಕೊಂಡಿರೋ ಡಾ ವಣ್ ಗೇರಿ ಆಲದ್ ಮರ್ದಪ್ಪ.. ಭಾಲ್ಕಿ ಭೀಮಣ್ಣ ನ ಮರಿ ಇವ್ರೆಲ್ಲಾ ಈ ಗ್ಲಾದ್ರು ತಿಳ್ಕೊಂಡು ಸರಿ ಹೋದ್ರೆ ಉಳ್ಗಾಲ.. ಜಾಗತಿಕ ದ ಜೊತೆ ಕೈ ಜೋಡಿಸಿ ಇತರೇ ಜಾತಿ- ಪಂಗ್ಡ ದಂತೆ ಲಿಂಗಾಯತ ದಲ್ಲಿ ವೀರಶೈವಾ ನೂ ಒಂದು.. ಆದ್ರಿಂದ ಲಿಂಗಾಯತ ಪ್ರತ್ಯೇಕ ಧರ್ಮ ಅಂತ ಘೋಷಿಸೋದಕ್ಕೆ ಕೈ ಜೋಡಿಸಿದ್ರೆ ಸರಿ… ಇಲ್ಲಾಂದ್ರೆ ಅವರ್ ಧರ್ಮ ಅವರಿಗೆ.. ನಮ್ ಧರ್ಮ ನಮ್ಗೆ.. ಅವರ್ ಆಡ್ಡ ದಾರೀನೇ ಬೇರೆ… ಲಿಂಗಾಯತ ಅನ್ನೋ ನಮ್ ಹೆದ್ದಾ ರೀ ನೇ ಬೇರೆ… ಈ ಬಾರಿ ಲಿಂಗಾಯತರ ಧರ್ಮ ದ್ ವಿಚಾರದಲ್ಲಿ ರಾಜಕೀಯ ಮಾಡ್ದೆ ಎಲ್ರೂ ಒಟ್ಟಾಗಿ ಕೈ ಜೋಡಿಸಿದ್ರೆ ಸರಿ… ಇಲ್ಲಾ೦ದ್ರೆ ಯಾರಿಗ್ ಹೆಂಗ್ ಬುದ್ಧಿ ಕಲಿ ಸ್ಪೇ ಕು… ಲಿಂಗಾಯತರಿಗೆ ಗೊತ್ತಿದೆ… ಇನ್ನೇನು ಒತ್ತೋ ಟೈಂ ಬ೦ತು… ಎಲ್ಲ ಪಕ್ಷ ದೋವ್ರು ಹಿಂದೆ ನಿತ್ಕೊಂಡು ಲಿಂಗಾಯ್ತರ ಹೋರಾಟಕ್ಕೆ ಕೈ ಜೋಡಿಸ್ಲಿಲ್ಲಾ ಅಂದ್ರೆ ಪರಿಸ್ಥಿತಿ ನೆಟ್ ಗಾಗೋದು ಅಷ್ಟಕಷ್ಟೇ ಕಣ್ರೀ …

  ಈ ವಿಡಿಯೋ ನೋಡಿದ್ರೆ ಲಿಂಗಾಯ್ತರ್ ಗೆಲ್ಲ ದ ರಿದ್ರ ಮುಂಡೇದವು ಪಂಚ ಪೀಠಗಳನ್ನು ಉಗೀಬೇಕು ಅನ್ನಿಸ್ ದೇ ಇನ್ನೇನು ….???!!!!

  ನಿಜಗುಣ ಮೂರ್ತಿ ಕನಕಪುರ

  ಈ ರೀತಿಯ ಹೆಚ್ಚಿನ ಪೋಸ್ಟ್‌ಗಳನ್ನು ನೋಡಲು ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ಕರ್ನಾಟಕ ಸೇರಲು, ಇಲ್ಲಿ ಕ್ಲಿಕ್ ಮಾಡಿ

  https://kutumbapp.page.link/wRRtHdvn6aYnP3e5A?ref=VUAL8

 3. Some please share how to join Jagatika Lingayat Mahasabha.
  Does it have any branch in Bangalore or its contact number/email etc.

Leave a Reply

Your email address will not be published. Required fields are marked *

error: Content is protected !!