*ಜ್ಯೋತಿಯ ಮುಟ್ಟಿದ ಜ್ಯೋತಿಯಂತಾಗ್ಯಾರೊ*

*ಜ್ಯೋತಿಯ ಮುಟ್ಟಿದ ಜ್ಯೋತಿಯಂತಾಗ್ಯಾರೊ*

ಕಲ್ಯಾಣ ಬಸವಣ್ಣನ ಕಾರುಣ್ಯಕೆ ಮಾರು ಹೋಗಿ
ಕಲ್ಯಾಣ ಕಡೆಗೆ ಮುಖಮಾಡಿ/ ಶರಣ ಬಸವ
ಬಸವನ ಮಾರ್ಗ ಹಿಡದಾರೋ

ಕರ್ಮಠರ ಕಡೆಗಣಿಸಿ ಕಡಕೋಳದ ಕಾರಂಜಿಗಿ
ಇಷ್ಟಲಿಂಗಾವ ಕಟ್ಟ್ಯಾರೋ / ಶರಣ ಬಸವ
ಜಾತಿ ಅಯ್ಯಗೋಳ ಮೆಟ್ಟ್ಯಾರೋ

ಸಕಲ ಜೀವಕೆಲ್ಲ ನೀರು ಆಹಾರ ನೀಡಿ
ದಾಸೋಹ ತತ್ವ ಮೆರದಾರೊ / ಶರಣ ಬಸವ
ಕಲ್ಯಾಣದ ತಲಬಾಗಿಲಿಗಿ ನಿಂತಾರೋ

ಮಾತಿಲ್ಲದ ಮೌನದಿ ಕೃಷಿ ಕೃತ್ಯ ಕಾಯಕ ನಡೆಸಿ
ಮಣ್ಣಿನ ಕಣ ಕಣದಿ ಬಿತ್ತ್ಯಾರೋ/ ಶರಣ ಬಸವ
ಹೊನ್ನಿನ ಫಸಲ ಪಡದಾರೋ

ಜ್ಯೋತಿಯ ಮುಟ್ಟಿದ ಜ್ಯೋತಿಯಂತಾಗ್ಯಾರೊ
ಗುರು-ಶಿಷ್ಯರೊಂದಾಗಿ ನಡದಾರೋ/ಶರಣಬಸವ
ಸಮತೆಯ ಯೋಗವ ಮಾಡ್ಯಾರೋ

೦ ವಿಶ್ವಾರಾಧ್ಯ ಸತ್ಯಂಪೇಟೆ

Leave a Reply

Your email address will not be published. Required fields are marked *

error: Content is protected !!