*ಕೊನೆಗೂ ಹೇಳಲಿಲ್ಲ ಸತ್ಯ*

*ಕೊನೆಗೂ ಹೇಳಲಿಲ್ಲ ಸತ್ಯ*

ಮಿಥ್ಯ ಮಾಯದ ಬದುಕೆಂದವರ
ಮುಚ್ಚಿದ ಮುಸುಕು ಸರಿಸಲಿಲ್ಲ.
ತಿಪ್ಪೆ ಹೊಲಸನ್ನು ಹೊಲಸೆಂದು
ಅರ್ಥ ಮಾಡಿಸಲಿಲ್ಲ

ನಿಶಬ್ಧದ ನಡುವೆ ಹಕ್ಕಿ ಪಕ್ಕಿ
ಅಲಲ್ಲಿ ಇಂಚರದ ನದಿಯ ಹರವು
ಕಾಗೆ ಗೂಬೆ ನರಿ ನಾಯಿಯತನವ
ಹೇಳಿದಿರಿ ಮಾತ್ರ, ಹೇಳಲಿಲ್ಲ ಸತ್ಯವನ್ನು.

ವೇದ ಶಾಸ್ತ್ರ ಆಗಮ ಪುರಾಣಗಳ
ಕಥೆಗಳೆಲ್ಲ ಓದಿನ ಮಾತೆಂಬ
ಶರಣರ ಚಿಂತನೆಗಳ ಹರಡಲಿಲ್ಲ.
ಪಾಪಸು ಕಳ್ಳಿಗಳ ಪರಲು ಬಿಡಿಸಲಿಲ್ಲ.

ನೀವೊಂದು ಸ್ಪಟಿಕ, ಎರಡು ಮಾತಿಲ್ಲ
ಮಾತು ಮುತ್ತಿನ ಹಾರ, ನುಡಿ ನಡೆಯಲ್ಲಿ.
ಹೊರೆಯಾಗಲಿಲ್ಲ, ಹೊಗೆ ಹಾಕಲಿಲ್ಲ.
ಮೆಲ್ಲಗೆ ಸರಿದು ಹೋದಿರಿ, ಸತ್ಯ ಹೇಳಲಿಲ್ಲ.

ನ್ಯಾಯ ನಿಷ್ಠುರತನ ರೂಢಿಸಲಿಲ್ಲ
ಲೋಕವಿರೋಧಿ ಆಗಲಿಲ್ಲ.
ಇದ್ದು ಇಲ್ಲದಂತೆ ಎದ್ದು ಹೋದಿರಿ
ಗೊತ್ತೆ ಆಗಲಿಲ್ಲ ! ಕೊನೆಗೂ ಸತ್ಯ ಹೇಳಲೆ ಇಲ್ಲ !!

೦ ವಿಶ್ವಾರಾಧ್ಯ ಸತ್ಯಂಪೇಟೆ

7 thoughts on “*ಕೊನೆಗೂ ಹೇಳಲಿಲ್ಲ ಸತ್ಯ*

 1. ಸತ್ಯಬಯಲಿಗೆ ಬರಲಿಲ್ಲ ಕವಿತೆ ಸತ್ಯವಾಗಿರಬಹುದು ಹಲವರ ದೃಷ್ಟಿಯಲ್ಲಿ ಆದರೆ ಜನಮಾನಸಕ್ಕೆ ನಿಷ್ಟೂರ.ಇವತ್ತು ಯಾರಿಗೆ ಬೇಕಾಗಿದೆ ನಿಷ್ಟೂರತೆ ,
  ಕಾಲಾನೂ ಕಾಲದಿಂದಲೂ ಇದುಇದ್ದದ್ದೇ.ಇವತ್ತು ಗಾಂಧೀಜಿ,ಬಸವಣ್ಣ,ಅಂಬೇಡ್ಕರ ,ವಿವೇಕಾನಂದರ ಸತ್ಯ
  ಮತ್ತು ಕಲಬುರ್ಗಿಸರ್,ಗೌರಿಲಂಕೇಶರ ಸತ್ಯ ಸತ್ತುಹೊಯಿತಲ್ಲ ಯಾರಿಗೆಬೇಕಾಗಿದೆಹೇಳಿ.ಇದು ಬರೀತಲಿಕೆಡಸಿಕೊಂಡವರ ಕೆಲಸೆಂದು ಅನಿಸಬಹುದಲ್ಲವೇ?ಶರಣುಗಳು.

 2. ಎಂಥಹ ಸತ್ಶವಾದ ನುಡಿಮುತ್ತುಗಳು.
  ಕೇಳಲು ಕಠೋರ ನಿಷ್ಠುರ ವೆನಿಸಿದರೂ
  ಅಲ್ಲಗಳೆಯುವಂತಿಲ್ಲ!
  ನಿಷ್ಕಲ್ಮಶ ಮಗುವಂಥ ಮನಸು!
  ಯಾವುದಕ್ಕೂ ಅಂಟಿಕೊಳ್ಳದ ನಿರ್ಮೋಹಿ!
  ಸಕಲ ಭೋಗ ತೊರೆದ ವಿರಾಗಿ! ಎಲ್ಲವೂ ಸರಿಯೆ!
  ಆದರೂ ಆದರೂ ನೀವು ಹೇಳಿದಂತೆಯೆ!

 3. “ಸಾಕ್ಷಿ ಪ್ರಜ್ಞೆ”
  ಕೇವಲ ಇರುವಿಕೆ
  ಕ್ರಿಯಾಶೀಲವಾಗಿದ್ದರೂ, ಪ್ರತಿಭಟನಾತ್ಮಕತೆ ಇಲ್ಲ ದಿರುವುದು.
  ಸತ್ಯ ಯಾವತ್ತಿಗೂ ಸತ್ಯ ತನ್ನ ತಾ ಪ್ರಕಟಗೊಳ್ಳಲಿ

 4. ತುಂಬಾ ಪರಿಣಾಮಕಾರಿ ಕವಿತೆ. ಹೀಗೆ ಹೇಳುವ ನಿಮ್ಮ ದಿಟ್ಟತನ ಖುಷಿ ನೀಡಿತು.

 5. ಸತ್ಯ ಮಾತು. ಶ್ರೀಗಳು ಸತ್ಯದ ಪರ‌ ನಿಲ್ಲಬೇಕಿತ್ತು. ಶರಣರನ್ನು ಶರಣ ಚಿಂತನೆಗಳನ್ನು ಮರುಸ್ಥಾಪಿಸುವ ತಾಕತ್ತು ಅವರಿಗಿತ್ತು. ಆ ಕೆಲಸ ಆಗಬೇಕಿತ್ತು. ಆಗಲಿಲ್ಲ.😪

  1. ಚಿಂತನೆ ಮಾಡುವಂತಹ ಬರಹವನ್ನು ಬರೆದಿದ್ದೀರಿ ಬಹಳ ಸಂತೋಷವಾಯಿತು ತುಂಬು ಹೃದಯದ ಧನ್ಯವಾದಗಳು

 6. ಚಿಂತನೆ ಮಾಡುವಂತಹ ಬರಹವನ್ನು ಬರೆದಿದ್ದೀರಿ ಬಹಳ ಸಂತೋಷವಾಯಿತು ತುಂಬು ಹೃದಯದ ಧನ್ಯವಾದಗಳು

Leave a Reply

Your email address will not be published. Required fields are marked *

error: Content is protected !!