ಆರಾಧ್ಯ ಜಂಗಮರ ನಡೆ ,ಲಿಂಗಾಯತರಿಗೆ ಉರುಲು ?!


1891ರಲ್ಲಿ ಬ್ರಿಟಿಷ್ ಮತ್ತು ಮೈಸೂರು ಮಹಾರಾಜರ ಸಮ್ಮಿಶ್ರ ಸರ್ಕಾರ ಜನಗಣಿತದಲ್ಲಿ ಲಿಂಗಾಯತರನ್ನು ಶೂದ್ರ ಪಟ್ಟಿಗೆ ಸೇರಿಸಲಾಗುತ್ತದೆ. ಶೂದ್ರರ ಪಟ್ಟಿಗೆ ಸೇರಿಸಿದ್ದು ಸುಮ್ಮನೆ ಸೇರಿದ್ದಲ್ಲ. ಇಂಗ್ಲಿಷ್ ವಿದ್ವಾಂಸರು ಅಧ್ಯಯನ ಮಾಡಿ ಲಿಂಗಾಯತದ ಇತರೆ ಸಮುದಾಯಗಳನ್ನು ಅರಿತು ಒಂದೊಂದು ಕಸಬು ಮಾಡುವವರು ಇವರು ಮನಗಂಡು ಶೂದ್ರರ ಪಟ್ಟಿಗೆ ಸೇರಿಸುತ್ತಾರೆ. ಇದರಿಂದ ಕೆರಳಿ ಕೆಂಡವಾಗಿದ್ದು ಲಿಂಗಾಯತದೊಳಗಿರುವ ವೀರಶೈವ ಆರಾಧ್ಯ ಜಂಗಮರು. ಈ ವೀರಶೈವ ಆರಾಧ್ಯ ಜಂಗಮರು ಬಸವಣ್ಣ ಮತ್ತು ಶರಣರ ಕ್ರಾಂತಿಕಾರಕ ವಿಚಾರಗಳನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಬಸವಣ್ಣ ಬ್ರಾಹ್ಮಣರ ವಿರುದ್ಧ ಸಮರ ಸಾರಿದ್ದು ಆತನ ಸಮುದಾಯ ಬ್ರಾಹ್ಮಣರು ಬಸವಣ್ಣ ಪಿತೂರಿ ಮಾಡಿ ಲಿಂಗಾಯತ ಮತ ಸ್ಥಾಪಿಸಿ ಎಲ್ಲಾ ಕುಲಗಳನ್ನು ಒಟ್ಟಿಗೆ ಸೇರಿಸಿ, ಶರಣರು ಎಂದು ಅವರೆಲ್ಲನ್ನು ಸಂಭೋದಿಸಿ, ನಮ್ಮ ವಿರುದ್ಧ ಬಂಡಾಯ ಮಾಡಿದ ಕುತಂತ್ರಿ ಬಸವ ಎಂದು ಸ್ವಥಹ ಬ್ರಾಹ್ಮಣರೆ ಹೇಳಿಕೊಂಡಿದ್ದಾರೆ ಎಂದು ಬ್ರಿಟಿಷರು ದಾಖಲು ಮಾಡಿದ್ದಾರೆ. 1881 ಜನ ಗಣಿತಿಯಲ್ಲಿ ಲಿಂಗಾಯತ ಮತದ ಬಗ್ಗೆ ವಿಚಾರಗಳನ್ನು ಪ್ರಸ್ತಾಪಸುತ್ತ,ಬಸವನು ಲಿಂಗಾಯತ ಮತ ಸ್ಥಾಪಕನಾಗಿದ್ದು, ವೇದ ಮತ್ತು ಬ್ರಾಹ್ಮಣರ ಆಚರಣೆ ತಿರಸ್ಕರಿಸಿದ ಮಹಾನ್ ಕ್ರಾಂತಿಕಾರಿ ಎಂದು ಬ್ರಿಟಿಷ್ ವಿದ್ವಾಂಸರು ಹೇಳಿಕೊಂಡಿದ್ದಾರೆ.


The lingayat or sivacharya are followars of a sect which arose on the downfall of the jains in the 12th century,and which recived its principal development in the kannada speakinga countries. Its founder was basava,the primeminister of the kalachurya king bijjala of kalyana,whose rule extended the nortern ports of mysore.basava wsa an aradya Brahman,but refused to wear the Brahmanical thread, and rejected the authority of the Vedas and the Brahmans, together with the observances of caste, pilgriage and penance (levis rice 1884)

ನಮ್ಮನ್ನು ಲಿಂಗೀ ಬ್ರಾಹ್ಮಣರು ಎಂದು ಪರಿಗಣಿಸಿ ಜನ ಗಣಿತಿಯಲ್ಲಿ ಸೇರಿಸಬೇಕು ಎಂದು ದಂಗೆ ಎಬ್ಬಿಸುತ್ತಾರೆ. ಒಂದು ಕಡೆ ಬ್ರಾಹ್ಮಣರಿಗೆ ತಲೆ ನೋವು ಆಗುತ್ತಾರೆ. ಇವರೇನಪ್ಪ ನಮ್ಮ ಸರಿ ಸಮ ಬಂದು ಕೂಡಲು ಹವಾನಿಸುತ್ತಾರೆ ಇವರಲ್ಲಿ ಹಡಪದರು ಇದ್ದಾರೆ, ಚಾಮ್ಮರು ಇದ್ದಾರೆ ಎಂದು ಬ್ರಾಹ್ಮಣರು ವಿರೋಧ ಮಾಡುತ್ತಾರೆ. ಇವರಿಬ್ಬರ ಮದ್ಯೆ ತಿಕ್ಕಾಟ ಬ್ರಿಟಿಷ್ ಅಧಿಕಾರಿಗಳು ಮೈಸೂರಿನ ಮಹಾರಾಜರ ಗಮನಕ್ಕೆ ತರುತ್ತಾರೆ.

ಬಸವಣ್ಣ ಯಾವುದನ್ನೂ ತಿರಸ್ಕಾರ ಮಾಡಿ ಹೊಸ ಸಮಾಜವನ್ನು ಕಟ್ಟಿದ್ದರೋ ಅದನ್ನು ಮತ್ತೆ ಆರಾಧ್ಯರು ಅದಕ್ಕೆ ಕೊಂಡೋಯ್ಯುವ ಪ್ರಯತ್ನ ವೀರಶೈವ ಬ್ರಾಹ್ಮಣ, ವೀರಶೈವ ಕ್ಷತ್ರಿಯ, ವೀರಶೈವ ವೈಷ್ಯ, ವೀರಶೈವ ಶೂದ್ರ ಲಿಂಗಾಯತರನ್ನು ಮತ್ತೊಮ್ಮೆ ಚತುರ್ವರ್ಣ ಆಧಾರಿತ ಯೋಜನೆಯನ್ನು ಸರ್ಕಾರದ ಮುಂದಿಡುತ್ತಾರೆ. ವೀರಶೈವ ಬ್ರಾಹ್ಮಣರ ಗುಂಪಿಗೆ ಜಂಗಮರು ಮತ್ತು ಆರಾಧ್ಯರು. ದೇಸಾಯಿ, ದೇಶಪಾಂಡೆ ಇತೆರೆ ಮನೆತನದವರು ವೀರಶೈವ ಕ್ಷತ್ರಿಯ ಗುಂಪಿಗೆ ಸೇರಿಸುತ್ತಾರೆ. ವ್ಯಾಪಾರಿಗಳು ಉದ್ದಿಮೆಗಳು ಬಣಿಜಿಗ ವೈಷ್ಯ ಗುಂಪಿಗೆ ಸೇ ರಿಸುತ್ತಾರೆ. ಲಿಂಗಾಯತ ಉಳಿದೆಲ್ಲಾ ಸಮುದಾಯಗಳು ಶೂದ್ರರ ಗುಂಪಿಗೆ ಸೇರಿಸುತ್ತಾರೆ. ಹೀಗೆ ತಂತ್ರ ಮಾಡಿದ್ದು ಕರಿ ಬಸವ ಶಾಸ್ತ್ರಿ ಎನ್ನುವ ಜಾತಿ ಜಂಗಮ.

ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಕೃಷಿ ಮಾಡುವ ಲಿಂಗಾಯತರೆ, ನೀವು ಯಾವ ಸ್ಥಾನದಲ್ಲಿದ್ದೀರಿ ಎಂದು ಒಮ್ನೆ ಆಲೋಚಿಸಿ. ಇಂದು ವೀರಶೈವ ಜಂಗಮರ ಮಾತು ಕೇಳಿ ನೀವು ವೀರಶೈವ ಲಿಂಗಾಯತ ಎಂದು ಹೇಳಿಕೊಳ್ಳುವಿರಿ. ನಿಮ್ಮನ್ನು ಬಿಟ್ಟು ಈಗ ವೀರಶೈವ ಜಂಗಮರು ಬೇಡ ಜಂಗಮರು ಎಂದು ಹೇಳಿಕೊಂಡು ನಮಗೆ ಪರಿಶಿಷ್ಟ ಜಾತಿ (sc) ಪ್ರಮಾಣ ಪತ್ರ ಬೇಕು ಎಂದು ನಿರಂತರ ಹೋರಾಟ ಮಾಡುತ್ತಿದ್ದಾರೆ. 1890 ರಲ್ಲಿ ಶೂದ್ರ ಪಟ್ಟಿಗೆ ಸೇರಿಸಿದರೆ ನಾವು ಬ್ರಾಹ್ಮಣರಿಗೆ ಸಮ ಇದ್ದೇವೆ ಎನ್ನುವವರೇ ಇಂದು sc ಗೆ ಸೇರಿಸಿ ಮೀಸಲಾತಿ ಕೊಡಿ ಎಂದು ಕೇಳುವ ಬದಲು ಈಗ 10%ಮೀಸಲಾತಿ ಪಡೆದ ಬ್ರಾಹ್ಮಣ ಸಮುದಾಯಕ್ಕೆ ಸೇರಿ ಅದೇ 10% ಮೀಸಲಾತಿ ನೀವು ಆರಾಮವಾಗಿ ಪಡೆಯಬಹುದು ಮತ್ತು ಬ್ರಾಹ್ಮಣ ಸರಿಸಮ ತಾವು ಎಂದು ರುಜುವಾತು ಮಾಡಲು ಒಳ್ಳೆಯ ಸಂದರ್ಭದ ಇದೆ.

O Basavaraj M Patil 

One thought on “ಆರಾಧ್ಯ ಜಂಗಮರ ನಡೆ ,ಲಿಂಗಾಯತರಿಗೆ ಉರುಲು ?!

Leave a Reply

Your email address will not be published. Required fields are marked *

error: Content is protected !!