*ನನ್ನ ದೇಹವು ನೀವು ಪರೀಕ್ಷೆಗೆ ಕೊಟ್ಟು ಬಿಡಿ*
ನನ್ನ ದೇಹವು ನೀವು ಪರೀಕ್ಷೆಗೆ ಕೊಟ್ಟು ಬಿಡಿ
ಮಕ್ಕಳೆಲ್ಲ ಕಲಿಯಲಿ ವಿಜ್ಞಾನವ.
ದೇಹ ವಿಸ್ಮಯ ಗೂಡು,ಮಲ ಮೂತ್ರ ಕೀವು
ಅದರೊಳಗಿನ ಜೀವ ಜಂತಿನ ಅರಿವಾಗಲಿ.
ದುಷ್ಟ ಬುದ್ದಿಯ ಮಿದುಳು, ಮೋಸದಾಲೋಚನೆಯು
ಎಲ್ಲೆಲ್ಲಿ ಇವೆಯೆಂದು ಅರಿದಾದರೂ
ಸಾರ್ಥಕವಾಗಲಿ ಬದುಕು.
ಹುಟ್ಟಿದಾರಭ್ಯ ಸಾಯುವ ವರೆಗಿನ
ಲೆಕ್ಕ ಪತ್ರಗಳೆಲ್ಲ ಚುಕ್ತ ಮಾಡಿ ನೋಡಲಿ.
ಅಂತಃಕರಣವು ಎಲ್ಲಿ ? ತಾಯಿ ಮಮತೆ ಎಲ್ಲಿ ?
ಅರಿಯಲಿ ಇಂಚಿಂಚು ನನ್ನ ಮನವ.
ರೋಗ ರುಜನಿಯ ಗೂಡು
ಕೆಮ್ಮು ವಾತಾ ಪಿತಗಳು ನರನಾಡಿ ವ್ಯಾಪಿಸುವ
ಬಗೆಯ ಬಗೆದು ಇಂಚಿಂಚು ಕೋಯ್ದು ಪರೀಕ್ಷೆ ಮಾಡಿ ನೋಡಲವರು.
ಛಲವಿಲ್ಲದ ಅಳ್ಳೆದೆಯು,
ಡೊಗ್ಗು ಸಲಾಮಿನ ಭಾವ
ಹೊಂದಿಕೊಂಡು ಬದುಕುವ ಮೋಸದ ಮನ
ಎಲ್ಲೆಲ್ಲಿ ಇವೆಯೆಂದು ಹುಡುಕಲವರು.
೦ ವಿಶ್ವಾರಾಧ್ಯ ಸತ್ಯಂಪೇಟೆ