*ಪುಸ್ತಕ ಪ್ರಪಂಚವೆ ನನ್ನ ಪ್ರಪಂಚ*

*ಪುಸ್ತಕ ಪ್ರಪಂಚವೆ ನನ್ನ ಪ್ರಪಂಚ*

ಈ ಕವಲು ದಾರಿಯ ಒಂಟಿ ಪಯಣದಲ್ಲಿ ನನ್ನ ಪುಸ್ತಕ ಪ್ರಪಂಚವೇ ನನ್ನ ನಿಜವಾದ ಗೆಳೆಯ, ನಿಜ ಹೇಳಬೇಕೆಂದರೆ ನಾನು ಮುಚ್ಚಿಕೊಂಡಿರುವ ಪುಸ್ತಕ , ತುಂಬಾ ಅಂತರ್ಮುಖಿ, ಜೊತೆಗೆ ಸ್ವಲ್ಪ ಚಂಚಲ ಸ್ವಭಾವ,

ಪ್ರಕೃತಿ ಜೊತೆ ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ನನ್ನ ವಿದ್ಯಾಭ್ಯಾಸ ಮುಗಿಸಿದಳು. ಹಾಗಾಗಿ ತುಂಬಾ ಬೇಸರವಾದಾಗ ಪುಸ್ತಕಗಳು ಓದುವುದು , ಮನದಲ್ಲಿ ಬಂದ ಹಾಗೆ ಗೀಚುವುದು ಜೊತೆಗೆ ಸಂಜೆ ಆಯಿತೆಂದರೆ ಆಕಾಶ ನೋಡುವುದು, ಇದರಲ್ಲಿ ನನಗೆ ಸಮಾಧಾನ ಸಿಗುತ್ತದೆ . ಬೇಸರ ಆದಾಗೆಲ್ಲ ಮನೆ ಮಾಳಿಗೆಯ ಮೇಲೆ ಹೋಗಿ ಚಂದ್ರ ತಾರೆಗಳನ್ನು ನೋಡುತ್ತಾ ಒಬ್ಬಳೇ ಓಡಾಡುತ್ತಿರುವಾಗ ಆ ತಂಗಾಳಿ ಬೀಸಿ ಬಂದು ನನಗೆ ಸಾಂತ್ವನ ಹೇಳುವ ಹಾಗೆ ಭಾಸವಾಗುತ್ತದೆ.

ನನ್ನ ಪ್ರಪಂಚದ ಸಂಪೂರ್ಣ ಮಾಹಿತಿ ನನ್ನ ಹೆತ್ತವರಿಗಾಗಲಿ ನನ್ನ ಕೈ ಹಿಡಿದ ಗಂಡನಿಗಾಗಲಿ ತಿಳಿದೇ ಇಲ್ಲ , ಯಾಕೆಂದರೆ ನನ್ನ ಪ್ರಪಂಚವೇ ಈ ಪುಸ್ತಕ ಪ್ರಪಂಚ , ಈ ಪುಸ್ತಕ ಪ್ರಪಂಚ ಅಂದರೆ ನಮ್ಮ ಮನೆಯವರಿಗೆ ಅರಗದ ವಿಷಯ.

ಈ ಸಮಾಜಿಕ ಜಾಲತಾಣ ಅದರಲ್ಲೂ ಫೇಸ್ಬುಕ್ನಿಂದ ತುಂಬಾ ಸಹಾಯ ಆಗಿದೆ. ಯಾಕೆಂದರೆ ನನ್ನ ತಲೆಯಲ್ಲಿ ಓಡಾಡುತ್ತಕಂತಹ ವಿಷಯಗಳನ್ನು ಪುಸ್ತಕದಲ್ಲಿ ಬರೆದು ಅಲ್ಲೇ ಇಡ್ತಾ ಇದ್ದೆ , ಆದರೆ ನಾಲ್ಕು ಜನರಿಗೆ ನನ್ನ ಅನಿಸಿಕೆ ಅಭಿಪ್ರಾಯಗಳು ನನ್ನ ಬರವಣಿಗೆಯ ಬಗ್ಗೆ ತಿಳಿಸುವ ಅವಕಾಶ ಒದಗಿಸಿಕೊಟ್ಟಿದೆ ಈ fb.

ನನಗೆ ನನ್ನೊಳಗೆ ಮಾತನಾಡುವುದೆಂದರೆ ತುಂಬಾ ಇಷ್ಟ. ಯಾಕೆಂದರೆ ಅದು ಆತ್ಮವಲೋಕನ ಮಾಡಿಕೊಳ್ಳಲು ಒಂದು ನೆರವು ಎನ್ನಬಹುದು!

ನನ್ನ ಯಾವುದೇ ಸಮಸ್ಯೆ ಇರಲಿ, ಅದಕ್ಕೆ ನಾನೇ ಉತ್ತರ ಹುಡುಕಿ ಕೊಳ್ಳುತ್ತೇನೆ. ಕೆಲವೊಮ್ಮೆ ಗೆಳೆಯರು ಅಥವಾ ಕುಟುಂಬದವರು ಸಲಹೆ ನೀಡಿದ್ದರೆ, ಅದನ್ನು ಮತ್ತೆ ಮತ್ತೆ ಯೋಚನೆ ಮಾಡುತ್ತೇನೆ.

ನಮ್ಮೆಲ್ಲ ಕಷ್ಟ ನಷ್ಟಗಳಿಗೆ ಸುಖ ದುಃಖಗಳಿಗೆ ನಾವೇ ಜವಾಬ್ಧರಾಗಿದ್ದಾಗ ನಮ್ಮ ಸಣ್ಣತನ , ನಮ್ಮ ಸಣ್ಣ ಪುಟ್ಟ ಆಸೆಗಳು , ನಾವು ಮಾಡುವ ಸಣ್ಣ ತಪ್ಪುಗಳು, ಎಡಒಟ್ಟಾಗುತ್ತದೆ , ನಮಗೆ ಅವಮಾನ ಸೋಲು ನೋವು ದುಃಖ ತರಿಸುತ್ತದೆ. ಎಂದು ನಂಬಿದವಳು ನಾನು !

ಈ ಬರವಣಿಗೆ ಎಂದರೆ ಈಗಿನವರಿಗೆ ಫ್ಯಾಶನ್ ಆಗಿದೆ. ಎಲ್ಲಿಂದ ಏನು ತೆಗೆದುಕೊಂಡು ಅದನ್ನು ಬರೆದಹಾಕಿ ನಾನು ದೊಡ್ಡ ಸಾಹಿತಿ ಎಂದು ಹೇಳಿಕೊಳ್ಳುವಂತಹ ಕೆಟ್ಟ ಚಟ ಬೇರೆ.

ಇನ್ನು ನನ್ನ ಪ್ರಪಂಚದಲ್ಲಿ ಈಗ ಓದುವುದೇ ಹೆಚ್ಚು ಓದುವುದರಿಂದ ನನಗೆ ಕನ್ನಡ ಅಕ್ಷರಗಳ ಬಗ್ಗೆ ಗೊತ್ತಾಗುತ್ತದೆ ಬರೆಯುವುದೆಂದರೆ, ನನ್ನ ಜೊತೆ ಆಗುವಂತಹ ಕೆಲವೊಂದು ಸನ್ನಿವೇಶಗಳು ಆಗಿರಬಹುದು. ಅಕ್ಕ ಪಕ್ಕದವರ ಸಮಾಜದ, ಹೀಗೆ ಕೆಲವೊಂದು ವಿಷಯಗಳಾಗಿರಬಹುದು, ಈ ಬರವಣಿಗೆ ನನ್ನ ಜೊತೆಗೆ ಇರ್ತಕಂತದ್ದು ನನಗೆ ಅದು ಜವಾಬ್ದಾರಿ ಆಗಿದೆ.

ನಾನು ಕೆಲಸಕ್ಕೂ ಹೋಗ್ಬೇಕು ಮಕ್ಕಳನ್ನು ಕೂಡ ನೋಡಿಕೊಳ್ಳಬೇಕು , ಜೊತೆಗೆ ಮಧ್ಯಮ ವರ್ಗದ ನಮ್ಮಂತವರಿಗೆ ಹಣದ ಸಮಸ್ಯೆ ಕೂಡ ಎದುರಾಗುತ್ತದೆ .

ನನಗೆ ಅವಕಾಶ ಬರ್ಲಿಲ್ಲವಲ್ಲ ಅಂತ ಅಳುತ್ತಾ ಕುಡುವವಳು ನಾನಲ್ಲ. ಇನ್ನು ಜೀವನದಲ್ಲಿ ಯಾವುದೇ ಕನಸಿರಲಿ ಮುಂದೆ ಸಾಗುತ್ತಾ , ಈ ಬರವಣಿಗೆ ನಾನು ಯಾವತ್ತೂ ಬಿಡಬಾರದು ಎಂದು ತೀರ್ಮಾನಿಸಿದ್ದೇನೆ.

ಜೊತೆಗೆ ನನಗೆ ನನ್ನ ತಾಯಿ ಮನೆ , ಗಂಡನ ಮನೆ ಎರಡು ಇಷ್ಟ . ಗದ್ದೆ ತೋಟ ನಮ್ಮ ಊರು ಎಲ್ಲವೂ ಇಷ್ಟ.

ತುಂಬಾ ಯೋಜನೆಗಳಿವೆ. ಈಗಂತೂ ಸಮಯ ವ್ಯರ್ಥ ಮಾಡುವುದೆಂದರೆ ನನಗೆ ಆಗುವುದೇ ಇಲ್ಲ . ಒಬ್ಬ ಗ್ರಹಿಣಿಯಾಗಿ ಒಂದು ಸಮೂಹ ಮಾಡಿಕೊಂಡು ಏನಾದರೂ ಸಾಧನೆ ಮಾಡಬೇಕು ಅಂತ ತುಂಬಾ ಹುಮ್ಮಸ್ಸಿದೆ, ಒಂದು ಹೊಸ ಪ್ರಾರಂಭ, ಹೊಸ ಜೀವನ , ನಂಬಿಕಸ್ತರಿರುವಂತಹ ಒಂದು ತಂಡ , ಜೊತೆಗೆ ಒಂದಿಷ್ಟು ಬಂಡವಾಳ ಬೇಕೇ ಬೇಕು!

ಏನಾದರೂ ಮಾಡಬೇಕಾದರೂ ಹೊರ ಹೋಗಬೇಕು , ಈ ಸಮಾಜದ ನಡುವೆ ಬದುಕಬೇಕು, ಜೀವನ ಏಕೆ ಹೀಗೆ ? ಎಂದು ನನ್ನನ್ನು ಪ್ರಶ್ನಿಸಿಕೊಂಡಾಗ ನಾವು ಓದುವುದು ಬರೆಯುವುದು ನನಗೆ ಯಾವತ್ತಿಗೂ ತೃಪ್ತಿ ತಂದು ಕೊಡುತ್ತದೆ .

ನನ್ನ ಜೀವನದ ಅರ್ಧ ಭಾಗ ಬರವಣಿಗೆ , ಸಾರ್ಥಕ ತಂದುಕೊಟ್ಟಿದೆ , ಇದರಲ್ಲಿ ನನಗೆ ಸಂಪೂರ್ಣ ತೃಪ್ತಿ ಇದೆ . ನಾಳೆ ನಾನು ಸತ್ತರು ಒಬ್ಬ ಲೇಖಕಿಯಾಗಿ ಸಾಯಲು ಇಷ್ಟಪಡುತ್ತೇನೆ ಅಷ್ಟೇ

ಹೌದು, ಈ ಬರವಣಿಗೆ ನನ್ನ ಫ್ಯಾಷನ್ ಅಲ್ಲ ಅದು ನನ್ನ ಗುರುತು , ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಾಗುತ್ತದೆ

ಮೇನಕಾ ಪಾಟೀಲ್

Leave a Reply

Your email address will not be published. Required fields are marked *

error: Content is protected !!