ಒಡಲ ಕಿಚ್ಚು ಒಡಲನ್ನೇ ಸುಡುತ್ತದೆ !

೦. ಮೇನಕಾ ಪಾಟೀಕ , ಬೀದರ

ಗುಣಕ್ಕೆ ಮತ್ಸರ ಉಂಟೆ ? ಎಂದು ಒಬ್ಬ ಕವಿ ಕೇಳುತ್ತಾರೆ ನಮ್ಮೆದುರಿಗೆ ಬೆಳೆದವನು ನಮಗಿಂತಲೂ ಎತ್ತರಕ್ಕೆರ ತೊಡಗಿದ್ದಾಗ ಆತನ ಯೋಗ್ಯತೆ ಶಕ್ತಿ ಸಾಮರ್ಥ್ಯಗಳನ್ನು ಗೌರವಿಸಿ ಅಭಿನಂದಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಇದರಿಂದ ಕಳೆದುಕೊಳ್ಳುವುದೇನೂ ಇರುವುದಿಲ್ಲ ,ಬದಲಿಗೆ ಯೋಗ್ಯತೆಯನ್ನು ಗೌರವಿಸಿ ಸಮಾಧಾನವನ್ನು ಹಾಗೂ ಯೋಗ್ಯರ ಸಾಮೀಪ್ಯವನ್ನು ಪಡೆದುಕೊಳ್ಳುತ್ತೇವೆ.

ನನಗೆ ಇಲ್ಲದ ಅಧಿಕಾರ ಅವನಿಗೆ ಸಿಕ್ಕಿತ್ತು. ಪದವಿ ದೊರೆಕಿತು. ಪ್ರಶಸ್ತಿ ಬಂದಿತ್ತು ಎಂದು ಹೊಟ್ಟೆ ಹೊಸೆಯುತ್ತಾ ಕುಳಿತರೆ ಬಂದ ಲಾಭವೇನು?

ನನ್ನಲ್ಲಿ ಇದ್ದಿದ್ದು ಅವನಲ್ಲೇನಿದೆ? ಅವನಿಗೇಕೆ ಮಾನ-ಮರ್ಯಾದೆ ! ಎಂದು ಗೊಣಗುವ ಅನೇಕ ಜನರನ್ನು ನಾವು ನೋಡುತ್ತೇವೆ.

ಅಸೂಯೆ ಬಗ್ಗೆ ಒಬ್ಬ ಕವಿ ಹೀಗೆ ಹೇಳಿದ್ದಾರೆ ಹೊಟ್ಟೆಯೊಂದರ ರಗಳೆ ಸಾಲ ನಡದೇದೇನೋ ವಿಧಿ, ಹೊಟ್ಟೆ ಕಿಚ್ಚಿನ ಕಿಡಿ ನೆಟ್ಟಿಹನು ನರನೊಳು ಹೊಟ್ಟೆ ತುಂಬಿದ ತೋಳ ಮಲಗಿತ್ತು, ನೀ ಪೇರರ ದಿಟ್ಟಿಸುತ ಕರುಬಿಯೋ ಮಂಕು ತಿಮ್ಮ

ನಾನು ಅವನಿಗಿಂತ ಯೋಗ್ಯ ಎಂದು ತೀರ್ಮಾನಿಸುವವನು ನಾನೇ. ಆದರೆ ಅದಕ್ಕಿಂತ ಮೂರ್ಖತನ ಮತ್ತೊಂದಿಲ್ಲ . ನಮ್ಮ ಬಗ್ಗೆ ತೀರ್ಮಾನಿಸುವವರು ಜನ ಆಗಬೇಕು ,ಹೊರತು ನಾವಲ್ಲ.

ಹೀಗೆ ವೃತ್ತಿ ಮಾತ್ಸರ್ಯ ವೈದ್ಯನೊಬ್ಬ ಪ್ರಾಕ್ಟೀಸ್ ಚೆನ್ನಾಗಿ ನಡೆಯುತ್ತಿದೆ ಆದರೂ ಇನ್ನೊಬ್ಬ ವೈದ್ಯ ಆತನ ಹೆಸರು ಕಳಿಸಲು ನೋಡುತ್ತಾನೆ. ವಕೀಲನೊಬ್ಬ ಬಳಿ ಕಕ್ಷಿದಾರರು ಹೆಚ್ಚಿಗೆ ಹೋಗುತ್ತಿದ್ದರೆ ಇನ್ನೊಬ್ಬ ವಕೀಲ ಕೊಟ್ಟಿರುವುದು ಕೊಳ್ಳುತ್ತಾನೆ. ಒಬ್ಬ ವ್ಯಾಪಾರಿಗೆ ಸಹ ಒಬ್ಬ ವ್ಯಾಪಾರಿಯ ಮೇಲೆ ತುಂಬಾ ಅಸೂಹೆ ಇರುತ್ತದೆ. ಸರ್ವ ಸಾಮಾನ್ಯವಾಗಿ ಇವೆಲ್ಲವೂ ನಾವು ದಿನಮಾನಗಳಲ್ಲಿ ನೋಡುತ್ತಿರುವ ಸತ್ಯ ಸಂಗತಿಗಳು ಉಳಿದವರು ಹೋಗಲಿ, ಎಲ್ಲಾ ಬಿಟ್ಟ ಅಥವಾ ಬಿಟ್ಟಿದ್ದೇನೆ ಎಂದು ಹೇಳಿಕೊಳ್ಳುವ ವಿರೋಧಿಗಳನ್ನು ಹೊಟ್ಟೆಕಿಚ್ಚು ಕಾಡುತ್ತದೆ ಎಂದ ಮೇಲೆ ಸಾಮಾನ್ಯರ ಪಾಡೇನು ??

ಅಸೂಯೆಯಿಂದ ಹೊಟ್ಟೆ ಕಿರುಚಿಕೊಂಡ ಗಾಂಧಾರಿಗೆ ಹುಟ್ಟಿದ್ದು ನೂರೊಂದು ದುಷ್ಟ ಸಂತಾನ ಎಂದು ಕಥೆಯಲ್ಲಿ ಹೇಳುತ್ತಾರೆ. ಯಾವ ಮನುಷ್ಯ ನಿರಸೂಯನಾಗಿ ಇರುತ್ತಾನೋ ಅವನು ಸಮಾಧಾನದಿಂದಿರುತ್ತಾನೆ!

ಮನೆಯೊಳಗಿನ ಕಿಚ್ಚು ಮನೆಯನ್ನು ಸುಟ್ಟಂತೆ ಒಡಲೊಳಗಿನ ಕಿಚ್ಚು ಒಡಲಲ್ಲಿ ಸುಟ್ಟು ಭಸ್ಮಮಾಡುತ್ತದೆ ದಯವಿಟ್ಟು ಅಸೂಯೆಯನ್ನು ಬಿಟ್ಟು ನಿರಾಳವಾಗಿ ಬೇರೆಯವರ ಒಳಿತನ್ನು ಬಯಸುವರಾಗಿ.

೦ ಮೇನಕಾ ಪಾಟೀಲ್ , ಬೀದರ

One thought on “ಒಡಲ ಕಿಚ್ಚು ಒಡಲನ್ನೇ ಸುಡುತ್ತದೆ !

Leave a Reply

Your email address will not be published. Required fields are marked *

error: Content is protected !!