ಮೌಢ್ಯ ಮುಕ್ತ ಸಮಾಜ ಮಾತ್ರ ಬೆಳೆಯುತ್ತದೆ

ಮೌಢ್ಯ ಮುಕ್ತ ಸಮಾಜ ಮಾತ್ರ ಬೆಳೆಯುತ್ತದೆ

ಯಾದಗಿರಿ : 12 : ಯಾವ ಸಮಾಜ ಮೌಢ್ಯ ಮುಕ್ತವಾದ ಸಮಾಜವಾಗಿರುತ್ತದೋ ಆ ಸಮಾಜ ಬೆಳೆಯುತ್ತದೆ ಎಂದು ಗುರುಮಿಠಕಲ್ ಖಾಸಾ ಮಠದ ಶ್ರೀ. ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ನುಡಿದರು. ನಗರದ ಎನ್.ವಿ.ಎಂ. ಹಾಲ್ ನಲ್ಲಿ ಜರುಗಿದ ಕರ್ನಾಟಕ ರಾಜ್ಯ ವಿಜ್ಞಾನ ಸಂಶೋಧನಾ ಪರಿಷತ್ತು ಹಮ್ಮಿಕೊಂಡಿದ್ದ ಪದಾಧಿಕಾರಿಗಳ ಆಯ್ಕೆಯ ಸಂದರ್ಭದಲ್ಲಿ ಮಾತನಾಡಿದರು.


ಮುಂದುವರೆದು ಮಾತನಾಡಿದ ಅವರು, ನಾವು ವೈಜ್ಞಾನಿಕವಾದ ದಿನಮಾನಗಳಲ್ಲಿ ವಾಸ ಮಾಡುತ್ತಿದ್ದೇವೆ. ವಿಜ್ಞಾನದಿಂದ ಆವಿಷ್ಕರಿಸಿದ ಎಲ್ಲಾ ಸೌಲತ್ತುಗಳನ್ನು ಉಪಯೋಗಿಸುತ್ತಿದ್ದೇವೆ. ವಿಜ್ಞಾನವನ್ನು ಓದಿದ್ದೇವೆ. ಆದರೆ ಬದುಕಿನಲ್ಲಿ ಅದನ್ನು ಅಳವಡಿಸಿಕೊಂಡು ನಡೆಯಲು ಮೌಢ್ಯ ಬಿಡುತ್ತಿಲ್ಲ. ವಿಜ್ಞಾನದ ಪ್ರತಿಪಾದನೆ ಎಂದರೆ ಅದು ಸತ್ಯದ ಪ್ರತಿಪಾದನೆ. ಸತ್ಯವನ್ನು ನುಡಿಯಲು, ನಡೆಯಲು ಶಕ್ತಿ ಬೇಕು ಎನ್ನುವ ದಿನಮಾನಗಳಿವು. ಇಂಥ ಸಂಕೀರ್ಣ ಸಂದರ್ಭದಲ್ಲಿ ಯಾದಗಿರಿಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಸಂಶೋಧನಾ ಪರಿಷತ್ತು ಎಲೆ ಎತ್ತುತ್ತಿರುವುದು ಸಂತೋಷದ ಸಂಗತಿಯೆಂದವರು ಬಣ್ಣಿಸಿದರು.

ಡಾನ್ ಬಾಸ್ಕೋ ಚರ್ಚಿನ ಪಾದ್ರಿ. ಪ್ರವೀಣ ಕೆ.ಜೆ. ಮಾತನಾಡಿ ಎಲ್ಲಾ ಧರ್ಮದಲ್ಲೂ ಮೌಢ್ಯಗಳಿವೆ. ಆ ಮೌಢ್ಯಗಳ ವಿರುದ್ಧ ನಾವು ಹೋರಾಟ ಮಾಡಬೇಕು. ಮೌಢ್ಯ ಮುಕ್ತ ಸಮಾಜವನ್ನು ನಾವು ಕಟ್ಟಬೇಕು. ಮೌಢ್ಯರಹಿತ ಸಮಾಜದಲ್ಲಿ ಮಕ್ಕಳು ಆರೋಗ್ಯ ಪೂರ್ಣವಾಗಿ ಬೆಳೆಯಬಲ್ಲವು ಎಂದರು.
ಸೈಯದ್ ಅಲಿ ದರ್ಗಾ ಮುಪ್ತಿ ಸಮೀಸಾಬ, ಯಾವ ಧರ್ಮಗಳು ಮೌಢ್ಯದಿಂದ ಬದುಕಿ ಎಂದು ಹೇಳುವುದಿಲ್ಲ. ಮೌಢ್ಯಗಳನ್ನು ತೊಡೆಯಲೆಂದೆ ಧರ್ಮಗಳು ಹುಟ್ಟಿಕೊಂಡಿವೆ. ನೈಜ ಧರ್ಮದ ತತ್ವವನ್ನು ಅರಿಯದೆ ಬಹುತೇಕರು ಮೌಢ್ಯಗಳ ಗುಲಾಮರಾಗಿದ್ದಾರೆ. ಮೌಢ್ಯಗಳನ್ನು ತೊಡೆಯುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಹಮ್ಮಿಕೊಳ್ಳುವ ಕಾರ್ಯಕ್ರಮಕ್ಕೆ ನಾವು ಬೆಂಬಲ ನೀಡುತ್ತೇವೆ ಎಂಬ ಭರವಸೆಯನ್ನು ನೀಡಿದರು.


ಆರಂಭದಲ್ಲಿ ಜಿಲ್ಲಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಗುಂಡಪ್ಪ ಕಲಬುರ್ಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನೆಯ ರಾಜ್ಯದ ಉಪಾಧ್ಯಕ್ಷರಾದ ವಿಶ್ವಾರಾಧ್ಯ ಸತ್ಯಂಪೇಟೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಧ್ಯೇಹ ಉದ್ದೇಶಗಳ ಕುರಿತು ಸವಿಸ್ತಾರವಾಗಿ ಸಭೆಗೆ ತಿಳಿಸಿದರು.
ಸಭೆಯಲ್ಲಿ ಡಾ.ವೀರಬಸವಂತರೆಡ್ಡಿ, ಬಸವರಾಜ ಜೈನ್, ಮೌಲಾಲಿ ಅನಪೂರ, ನಾಗರತ್ನ ಅನಪೂರ, ಸಿದ್ರಾಮರೆಡ್ಡಿ ಇಟಗಿ, ಮಲ್ಲಿಕಾರ್ಜುನ ಹಿರೇಮಠ, ಕೃಷ್ಣ ಸುಬೇದಾರ ಪಿ.ಎಸ್.ಐ. ಬಸವರಾಜ ಬಾನಾರ, ಯುವಾನ್ ಸೂರ್ಯ, ಮುಂತಾದವರು ಮಾತನಾಡಿದರು.

ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ಗುಂಡಪ್ಪ ಕಲಬುರ್ಗಿ


ಸಭೆಯಲ್ಲಿ ಡಾ.ಶರಣಭೂಪಾಲರೆಡ್ಡಿ, ಸಾಬಣ್ಣ ಬೋರಬಂಡಾ, ಸಿದ್ದಪ್ಪ ಹೊಟ್ಟಿ, ಚೆನ್ನಪ್ಪಗೌಡ ಮೋಸಂಬಿ, ವಿಶ್ವನಾಥ ಶಿರವಾರಕರ್, ಸೋಮಣ್ಣ ಮಣ್ಣೂರು, ಯಂಕಪ್ಪ ಅಲೆಮನಿ, ಭೀಮಣ್ಣ ಮೇಟಿ , ಡಾ.ಭೀಮರಾಯ ಲಿಂಗೇರಿ, ಡಾ. ಫರವೇಜ್ ಕಾಡ್ಲೂರು, ನಾಗರತ್ನ ಯಕ್ಷಿಂತಿ, ಪತ್ರಕರ್ತರು, ವಿಚಾರವಾದಿಗಳು, ವರ್ತಕರು, ವಿವಿಧ ಪಕ್ಷದ ರಾಜಕಾರಣಿಗಳು, ಚಿಂತಕರು ಭಾಗವಹಿಸಿದ್ದರು. ಸಭೆಯನ್ನು ಜಗದೀಶ ನೂಲಿನವರ ನಡಿಸಿಕೊಟ್ಟರು. ಶಿವಣ್ಣ ಇಜೇರಿ ಸ್ವಾಗತಿಸಿದರು. ಪ್ರಾರ್ಥನಾ ಗೀತೆಯನ್ನು ವಿಶ್ವನಾಥರೆಡ್ಡಿ ಗೊಂದಡಗಿ, ಹಾಡಿದರು. ಕೊನೆಯಲ್ಲಿ ಡಾ. ಎಸ್. ಎಸ್. ನಾಯಕ. ವಂದನಾರ್ಪನೆಗೈದರು.

One thought on “ಮೌಢ್ಯ ಮುಕ್ತ ಸಮಾಜ ಮಾತ್ರ ಬೆಳೆಯುತ್ತದೆ

  1. ಮೌಢ್ಯ ಮರೆಯಾಗದೆ ಲೋಕಕ್ಕೆ ಬೆಳಕಾಗದು… ಜಗತ್ತು ಕಂಡ ಬುದ್ಧ ಬಸವ ಎಂಬ ಮಹಾ ಸೂರ್ಯ ರು ಎಲ್ಲರ ಹೃದಯದಲ್ಲಿ ಮೂಡಿದಾಗಲೇ ಭೂಮಿಯಲ್ಲಿ ಬೆಳಕು ಚೆಲ್ಲಲು ಸಾಧ್ಯ.. ಆದ್ದರಿಂದ ಶರಣತತ್ವ ಎಲ್ಲೆಡೆ ಪಸರಿಸಬೇಕು… ಸಾಹಿತ್ಯದ ಮೂಲಕ, ಸಂಗೀತದ ಮೂಲಕ, ಅನುಭವ ಪ್ರವಚನ ಉಪನ್ಯಾಸಗಳ ಮೂಲಕ, ತತ್ವಗಳ ನಿಜ ಆಚರಣೆಯ ಮೂಲಕ.

Leave a Reply

Your email address will not be published. Required fields are marked *

error: Content is protected !!