ರಾಮ ಮಂದಿರ ನಿರ್ಮಾಣಕ್ಕಾಗಿ ರಾಮನ ಹೆಸರಿನಲ್ಲಿ ಪುಂಡು ಪೋಕರಿಗಳು ಬೀದಿಗೆ ಇಳಿದು ಹೆದರಿಸುತ್ತಿದ್ದಾರೆ ಎಂದು ಮಾಜಿ ಮುಖ್ಯ ಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ತಮ್ಮ ಅಸಹನೆಯನ್ನು ವ್ಯಕ್ತ ಪಡಿಸಿದರು.

ಈ ಹಿಂದೆ ಕರ್ನಾಟಕದ ಮತ್ತೊಬ್ಬ ಮಾಜಿ ಮುಖ್ಯ ಮಂತ್ರಿ ಸಿದ್ಧರಾಮಯ್ಯ ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿರುವುದರಿಂದ ನಾನು ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಲಾರೆ. ಅಲ್ಲದೆ ಈ ಹಿಂದೆಯೇ ರಾಮ ಮಂದಿರಕ್ಕಾಗಿ ಹಣ ಇಟ್ಟಿಗಡ ಎರಡನ್ನೂ ಒಟ್ಟೊಟ್ಟಿಗೆ ಸಂಗ್ರಹಿಸಿದ್ದರು. ಆ ಹಣ ಎಲ್ಲಿದೆ ? ಲೆಕ್ಕ ಪತ್ರ ಯಾರ ಬಳಿ ಇದೆ ? ಎಂದು ಮಾಧ್ಯಮಗಳ ಎದುರು ಪ್ರಶ್ನಿಸಿದ್ದರು.
ಮಾಜಿ ಮುಖ್ಯ ಮಂತ್ರಿಗಳಿಬ್ಬರ ಹೇಳಿಕೆಯಿಂದ ಪ್ರೇರಿತರಾದ ಸಾಮಾಜಿಕ ಜಾಲ ತಾಣದ ನೆಟ್ಟಿಗರು ನಿನ್ನೆ ದಿನ ಸಂಪೂರ್ಣ ರಾಮ ಮಂದಿರದ ನಿರ್ಮಾಣಕ್ಕೆ ಸಂಗ್ರಹಿಸಿದ ಹಣಕ್ಕೆ ಲೆಕ್ಕ ಕೊಡಿ ಎಂಬ ಟ್ರೂಲ್ ಹೆಚ್ಚಿದ್ದು ಕಂಡು ಬಂತು.

ಟ್ವಿಟರ್, ಫೇಸಬುಕ್, ಇನ್ಸಟಾಗ್ರಾಮ್, ವಾಟ್ಸಪ್ಗಳ ತುಂಬೆಲ್ಲ ಟ್ರೋಲ್ ಮಾಡಿದ್ದು ಕಂಡು ಬಂತು.
ಲೆಕ್ಕ ಕೊಡುವುದು ನಿಜವಾದ ರಾಮಭಕ್ತರ ಕರ್ತವ್ಯವಾಗಿದೆ…. ರಾಷ್ಟ್ರ ಸಂಪತ್ತು ಜನಸಾಮಾನ್ಯರ ಹಣ..