ಅಮೀನರೆಡ್ಡಿ ಬಿಜೆಪಿ ಸೇರಿದ್ದರಿಂದ ಉಂಟಾಗುವ ಪರಿಣಾಮಗಳೇನು ?

ದರ್ಶನಾಪುರಗುರುಪಾಟೀಲಶಿರವಾಳಅಮೀನರೆಡ್ಡಿ ಬಿಜೆಪಿ ಸೇರಿದ್ದರಿಂದ ಉಂಟಾಗುವ ಪರಿಣಾಮಗಳೇನು ?

ಯಾದಗಿರಿ ಜಿಲ್ಲೆಯ ಶಹಾಪುರ ಮತಕ್ಷೇತ್ರದ ಜನತೆ ಹಾಗೂ ರಾಜಕಾರಣಿಗಳು ತುಂಬಾ ಭಿನ್ನ. ಇಲ್ಲಿನ ರಾಜಕಾರಣಿಗಳಾಗಲಿ, ಮತದಾರರಾಗಲಿ ಗುಂಡಾಗಿರಿಗೆ ಎಂದೂ ಆಸ್ಪದ ನೀಡಿದವರೆ ಅಲ್ಲ. ಗುಂಡಾಗಿರಿಗೆ ರಾಜಕಾರಣಿಗಳು ಸಪೋರ್ಟ್ ನೀಡುತ್ತಾರೆ ಎಂದು ಮನವರಿಗೆ ಆಗುತ್ತಲೇ ಮತದಾರ ತಕ್ಷಣ ಎಚ್ಚೆತ್ತುಕೊಂಡು ಆ ರಾಜಕಾರಣಿಯ ಕೋರೆ ಹಲ್ಲುಗಳನ್ನು ಮುರಿಯಬಲ್ಲ. ಕೋಡು ಕಿತ್ತಬಲ್ಲ. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಹಿಂದೆ ಈ ಕ್ಷೇತ್ರದಿಂದ ಗೆದ್ದು ಬಂದ ಶಿವಶೇಖರಪ್ಪ ಪಾಟೀಲ ಶಿರವಾಳ ಬರೀ ಉಪದ್ಪ್ಯಾಪಿ ಮಾತಾಡಿದಕ್ಕೆ ದರ್ಶನಾಪುರ ಗೆದ್ದು ಬಂದರು. ಅದಕ್ಕೂ ಪೂರ್ವದಲ್ಲಿ ಬಾಪುಗೌಡ ದರ್ಶನಾಪುರ ಆರ್ಭಟಿಸಿದ್ದಕ್ಕೆ ನೇರ ಮನೆಗೆ ಕಳಿಸಿದರು. ಇದೆಲ್ಲ ಒತ್ತಟ್ಟಿಗಿರಲಿ ಶರಣಬಸಪ್ಪಗೌಡ ದರ್ಶನಾಪುರ ಅವರ ಕಾಕ ಬಸವರಾಜಪ್ಪಗೌಡ ಮತ್ತು ಪಟಾಲಂ ಭೀಮರಾಯನ ಗುಡಿಯಲ್ಲಿ ಕುಂತು ಕೆಮ್ಮಿದ್ದಕ್ಕೆ ಶರಣಬಸಪ್ಪಗೌಡ ತನ್ನ‌ ಸ್ಥಾನವನ್ನು ಕಳಕೊಂಡು ಗುರುಪಾಟೀಲ ಆ ಸ್ಥಾನವನ್ನು ಅಲಂಕರಿಸಿದರು.

ಆದರೆ ಗುರುಪಾಟೀಲ ಒಳ್ಳೆಯವರೇನೋ ಹೌದು. ಆದರೆ ಅಪ್ಪನಂತೆ ಮಗ ಉದಾರಿ ಅಲ್ಲ ಎಂಬ ಹೇಳಿಕೆ ಕ್ಷೇತ್ರದ ತುಂಬಾ ಹಬ್ಬಿತು. ಆಗ ಕ್ಷೇತ್ರಕ್ಕೆ ಸಾಕಷ್ಟು ಕೆಲಸಗಳು ಆಗಲಿಲ್ಲ ಎಂಬ ಆಪಾದನೆಯ ಹಿನ್ನೆಯಲ್ಲಿ ಮತ್ತೆ ಶರಣಬಸಪ್ಪಗೌಡ ದರ್ಶನಾಪುರ ಗೆದ್ದು ಬಂದರು.

ಶರಣಬಸಪ್ಪಗೌಡ ಗೆದ್ದು ಬರಲು ತುಂಬಾ ಮಹತ್ವದ ಕಾರಣವೆಂದರೆ ಯಾಳಗಿಯ ಅಮೀನರೆಡ್ಡಿ ಪಾಟೀಲ ಜೆಡಿಎಸ್ ದಿಂದ ಸ್ಪರ್ದಿಸಿದ್ದು. ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಹಣಾಹಣಿಯಲ್ಲಿ ದರ್ಶನಾಪುರ ಗೆದ್ದು ಬಂದರು ಎಂಬ ವಾದವಿದೆ ಇದು ಅರ್ಧ ಸತ್ಯ. ಆದರೆ ಇದೆಲ್ಲಕ್ಕಿಂತ ಮುಖ್ಯ ಗುರುಪಾಟೀಲ ಹಾಗೂ ಅಮೀನರೆಡ್ಡಿಯ ನಡುವಿನ ಒಪ್ಪಂದ ತುಂಬಾ ಪ್ರಮುಖ ಪಾತ್ರ ವಹಿಸಿತು ಎಂದು ಹೇಳುವವರಿದ್ದಾರೆ.

ಇದೇನೆ ಇರಲಿ, ಇದೀಗ ಅಮೀನರೆಡ್ಡಿ ಪಾಟೀಲ ಯಾಳಗಿ ಜೆಡಿಎಸ್ ತೊರೆದು ಬಿಜೆಪಿಯನ್ನು ಅಪ್ಪಿಕೊಂಡಿದ್ದಾರೆ. ಗುರು ಪಾಟೀಲ ಅಮೀನರಡ್ಡಿಯೊಂದಿಗೆ ಸ್ಪಂದಿಸಿದರೆ ದರ್ಶನಾಪುರ ಅವರ ಮುಂದಿನ ಚುನಾವಣೆ ತುಂಬಾ ತುರುಸಿನಿಂದ ಕೂಡಲಿದೆ. ಹಾಗಂತ ದರ್ಶನಾಪುರ ಬಳಗವೇನು ಕೈಕಟ್ಟಿ ಕೂಡುವುದಿಲ್ಲ. ಅವರೂ ತಮ್ಮ ಇಡೀ ಕಸುವನ್ನು ಕ್ಷೇತ್ರದಲ್ಲಿ ಹಾಕಿ ಗೆಲ್ಲಲು ತಯಾರಿ ಮಾಡಿಕೊಳ್ಳುವವರೆ ಆಗಿದ್ದಾರೆ.

ಇತ್ತೀಚಿನ ರಾಜಕೀಯದಲ್ಲಿ ಹಣಬಲ ತುಂಬಾ ಮುಖ್ಯ. ಅದು ಅಮೀನರೆಡ್ಡಿ ಪಾಟೀಲಗೆ ಇದೆ. ಹೇಳಿಕೇಳಿ ಅಮೀನರೆಡ್ಡಿ ಕ್ಲಾಸ್ ಒನ್ ಕಂಟ್ರ್ಯಾಕ್ಟರ್. ಈಗಾಗಲೇ ದೇವೇಗೌಡರ ಸಹಾಯದಿಂದ ಸಾಕಷ್ಟು ಅದನ್ನು ಗಳಿಸಿ ಆಗಿದೆ. ಇದು ಮುಂದಿನ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ.

ಹಾಗಂತ ದರ್ಶನಾಪುರ ಅವರೇನು ಕಮ್ಮಿ ಇಲ್ಲ. ಅವರೂ ತಮ್ಮ ಶಕ್ತಿಯನ್ನು ಪಣಕ್ಕಿಟ್ಟು ಹೋರಾಡಬಲ್ಲರು. ಕ್ಷೇತ್ರದ ತುಂಬಾ ಅವರು ಮಾಡಿರುವ ಕೆಲಸಗಳು ಲೆಕ್ಕಕ್ಕೆ ಬಂದರೆ ಅಮೀನರೆಡ್ಡಿ ಬೇಕಾದಷ್ಟು ಲಾಗ ಹಾಕಿದರೂ ಅದು ಪರಿಣಾಮ ಉಂಟು ಮಾಡದು.

ಚುನಾವಣೆಗಳು ಇನ್ನೂ ಬಹುದೂರ ಇರುವಾಗ ಈ ಲೆಕ್ಕಾಚಾರಗಳೆಲ್ಲ ಏನಾದರೂ ಆಗುವ ಸಾಧ್ಯತೆ ಇದೆ. ಜೆಡಿ ಎಸ್ ಪಕ್ಷದಿಂದ ಮತ್ತೊಬ್ಬ ವ್ಯಕ್ತಿಯ ಸ್ಪರ್ಧೆ ಲೆಕ್ಕಾಚಾರವನ್ನು ಉಲ್ಟಾಪಲ್ಟಾ ಮಾಡಬಹುದು.

೦ ವಿಶ್ವಾರಾಧ್ಯ ಸತ್ಯಂಪೇಟೆ

One thought on “ಅಮೀನರೆಡ್ಡಿ ಬಿಜೆಪಿ ಸೇರಿದ್ದರಿಂದ ಉಂಟಾಗುವ ಪರಿಣಾಮಗಳೇನು ?

Leave a Reply

Your email address will not be published. Required fields are marked *

error: Content is protected !!