*ವಚನಗಳಲ್ಲಿ ಸಾಮಾಜಿಕ ಪರಿಕಲ್ಪನೆ ತೋರಿಸಿಕೊಟ್ಟ ಬಸವೇಶ್ವರರು – ಸತ್ಯಂಪೇಟೆ*

*ವಚನಗಳಲ್ಲಿ ಸಾಮಾಜಿಕ ಪರಿಕಲ್ಪನೆ ತೋರಿಸಿಕೊಟ್ಟ ಬಸವೇಶ್ವರರು – ಸತ್ಯಂಪೇಟೆ*

ಶಹಾಪುರ : ಜಗತ್ತಿನ ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಮಾನತೆ ಸಿಗುವಂತೆ ಮಾಡಿ ವಚನಗಳಲಿ ಸಾಮಾಜಿಕ ಪರಿಕಲ್ಪನೆ ತೋರಿಸಿಕೊಟ್ಟ ಬಸವೇಶ್ವರರು ಎಂದು ಮಾರ್ಗ ಪ್ರತಿಷ್ಠಾನದ ಅಧ್ಯಕ್ಷರಾದ ವಿಶ್ವಾರಾಧ್ಯ ಸತ್ಯಂಪೇಟೆ ಹೇಳಿದರು.

ನಗರದ ಎಸ್.ಬಿ.ದೇಶಮುಖ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಸಗರದ ಕಲಾನಿಕೇತನ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ಲಿಂಗೈಕ್ಯ ಬಸವರಾಜೇಂದ್ರಪ್ಪ ದೇಶಮುಖ ಅವರ ಸ್ಮರಣಾರ್ಥವಾಗಿ ರಾಜ್ಯಮಟ್ಟದ ವಚನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದರು.

ಸಮಾಜದಲ್ಲಿ ಆಳವಾಗಿ ಬೇರೂರಿದ ಜಾತಿ ಪದ್ಧತಿ,ಮೂಢನಂಬಿಕೆ ಮತ್ತು ಕಂದಾಚಾರಗಳ ವಿರುದ್ಧ ಧ್ವನಿ ಎತ್ತಿ ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ ಯುಗಪುರುಷ ಬಸವಣ್ಣನವರು ಎಂದು ಖ್ಯಾತ ವೈದ್ಯರಾದ ಡಾ:ಚಂದ್ರಶೇಖರ್ ಸುಬೇದಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವೇದಿಕೆಯ ಮೇಲಿರುವ ಹಿರಿಯ ಸಾಹಿತಿಗಳಾದ ಶಿವಣ್ಣ ಹಿಜೇರಿ ಮಾತನಾಡಿ ಬಸವಣ್ಣನವರ ವೈಚಾರಿಕತೆಯ ನಿಲುವುಗಳನ್ನು ಅರ್ಥೈಸಿಕೊಂಡು ಬದುಕಿದಾಗ ಮಾತ್ರ ಪ್ರತಿಯೊಬ್ಬರೂ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ನುಡಿದರು.

ಈ ಕಾರ್ಯಕ್ರಮದ ವೇದಿಕೆಯ ಮೇಲೆ ಅಬಕಾರಿ ಇಲಾಖೆಯ ಡಿ.ವೈ. ಎಸ್.ಪಿ.ಮಲ್ಲಿಕಾರ್ಜುನ್ ರೆಡ್ಡಿ ಜಾನಪದ ಸಾಹಿತಿ ಗೀತಾ ಹಿರೇಮಠ, ಕಲಾವಿದೆ ನಿರೂಪ ಪಾಟೀಲ್, ನೇಹಾ ಜಾದವ್,ವೀಣಾ,ಎಚ್.ಕೆ. ಪೂಜಾರಿ,ರಾಮು,ದೇವರಾಜ್, ಹಾಗೂ ಇನ್ನಿತರರು ಉಪಸ್ಥಿತರಿದ್ದರು .ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶಿವರಾಜ್ ದೇಶಮುಖ್ ವಹಿಸಿಕೊಂಡಿದ್ದರು.

ನಂತರ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ಪ್ರಶಾಂತ್ ಮತ್ತು ತಂಡದವರಿಂದ ಜಾನಪದ ಸಮೂಹನೃತ್ಯ,ಸವಿತಾ ಮತ್ತು ತಂಡದವರಿಂದ ಜಾನಪದ ಸಮೂಹನೃತ್ಯ,ಸ್ವಾತಿ ಕಲಬುರ್ಗಿ ಅವರಿಂದ ಸಮೂಹ ನೃತ್ಯ, ವೇದಾಂತ ನೃತ್ಯ ಕೇಂದ್ರದ ವಿದ್ಯಾರ್ಥಿಗಳಿಂದ ಸುಮ್ಮನೆ ಹಾಗೂ ಸಿದ್ದಾರ್ಥ್ ಪಾಟೀಲ್ ಅವರಿಂದ ವಚನ ಗಾಯನ ಜರುಗಿದವು. ಸಂದರ್ಭದಲ್ಲಿ ಹಲವಾರು ಸಾಧಕರಿಗೆ ಸನ್ಮಾನಿಸಿ ಸತ್ಕರಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ವಿದ್ಯಾರ್ಥಿ ಚೈತ್ರ ಪ್ರಾರ್ಥಿಸಿದರೆ ಬೂದಯ ಹಿರೇಮಠ ನಿರೂಪಿಸಿದರು,ಟ್ರಸ್ಟಿನ ಅಧ್ಯಕ್ಷರಾದ ಬಸವರಾಜ್ ಸಿನ್ನೂರ್ ಪ್ರಾಸ್ತಾವಿಕ ಮಾತುಗಳಾಡಿದರು. ಸವಿತಾ ಟೋಕಾಪುರ ವಂದಿಸಿದರು

Leave a Reply

Your email address will not be published. Required fields are marked *

error: Content is protected !!