ಲಿಂಗಾಯತ ಧರ್ಮದ ಒಳ ಸಮುದಾಯವನ್ನು ಛಿದ್ರ ಮಾಡುತ್ತಿರುವ ಯಡಿಯೂರಪ್ಪ : ಜಾಮದಾರ ಆರೋಪ

ಬೆಂಗಳೂರು : ಲಿಂಗಾಯತ ಧರ್ಮದ ಸಮುದಾಯವನ್ನು ಹತ್ತಿಕ್ಕಲು ಇನ್ನಿಲ್ಲದ ತಂತ್ರಗಳನ್ನು ಯಡಿಯೂರಪ್ಪ ಸರಕಾರ ಹೂಡುತ್ತಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಡಾ. ಎಸ್. ಎಂ.ಜಾಮದಾರ ಆರೋಪಿಸಿದರು.

ಬಸವಮಾರ್ಗ ವೆಬ್ ಡಾಟ್ ಕಾಮನೊಂದಿಗೆ ಮಾತನಾಡುತ್ತ ಅವರು ವೀರಶೈವ/ ಲಿಂಗಾಯತ ನಿಗಮ ಮಂಡಳಿಯ ರಚನೆಯ ಹಿಂದೆಯೂ ಇದೆ ತಂತ್ರವಿದೆ. ಲಿಂಗಾಯತರಿಗೆ ಸರಕಾರದ ಸೌಲತ್ತುಗಳನ್ನು ಕೊಡಲು ನಮ್ಮ ತಕರಾರಿಲ್ಲ. ಆದರೆ ಐತಿಹಾಸಿಕ ಸತ್ಯವಲ್ಲದ ವೀರಶೈವವನ್ನು ನಮ್ಮೊಂದಿಗೆ ತಳುಕು ಹಾಕುವುದಕ್ಕೆ ನಮ್ಮ ತಕರಾರು ಇದೆ ಎಂದವರು ತಿಳಿಸಿದರು.

ಇನ್ನು ಕೆಲವೇ ದಿನಗಳಲ್ಲಿ ಪಂಚಮಸಾಲಿ ಜನಾಂಗಕ್ಕೆ ೨ ಎ ಸೇರಿಸಲೂ ಬಹುದು. ಇದು ಪಂಚಾಮಸಾಲಿ ಜನಾಂಗವನ್ನು ಓಲೈಕೆ ಮಾಡುತ್ತಲೆ ಲಿಂಗಾಯತ ಧರ್ಮವನ್ನು ಛಿದ್ರ ಛಿದ್ರ ಮಾಡುವ ಸಣ್ಣತನ ಅಡಗಿದೆ.

ಲಿಂಗಾಯತ- ವೀರಶೈವ ಧರ್ಮದ ಸರಿಯಾದ ತಿರುಳನ್ನು ಅರಿಯದ ಮುಖ್ಯಮಂತ್ರಿ ಯಡಿಯೂರಪ್ಪನ ಮೂಲಕ ಲಿಂಗಾಯತ ಧರ್ಮವನ್ನು ಇಬ್ಭಾಗ ಮಾಡಲು ಹೊರಟಿದೆ ಎಂದು ಗಂಭೀರವಾದ ಆಪಾದನೆ ಮಾಡಿದರು.

ಇದೆಲ್ಲಕ್ಕಿಂತ ಮುಖ್ಯವಾಗಿ ಲಿಂಗಾಯತ ಧರ್ಮಕ್ಕೆ ಅಲ್ಪ ಸಂಖ್ಯಾತ ಮಾನ್ಯತೆ ನೀಡಲು ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ ಈ ಹಿಂದೆ ಮಾಡಿದ ಶಿಫಾರಸ್ಸನ್ನು ಜಾರಿಗೆ ತರಲು ಕೇಂದ್ರ ಸರಕಾರವನ್ನು ಒತ್ತಾಯಿಸಬೇಕು. ಆಗ ಕರ್ನಾಟಕದ ಲಿಂಗಾಯತ ಧರ್ಮಿಯರಿಗೆ ಶಾಲಾ ಕಾಲೇಜುಗಳ ಫೀಗಳಲ್ಲಿ, ಸೀಟುಗಳಲ್ಲಿ ಮೀಸಲಾತಿ ದೊರಕುತ್ತದೆ. ಸರಕಾರಿ ನೌಕರಿಯಲ್ಲೂ ಮೀಸಲಾತಿ ಸಿಗುತ್ತದೆ. ಪೂರ್ಣ ಪ್ರಮಾಣದ ಕೇಂದ್ರದ ನೆರವನ್ನು ಒದಗಿಸಿಕೊಡುವ ಬದಲು ಸರಕಾರ ಒಡೆದಾಳುವ ನೀತಿಯನ್ನು ಅನುಸರಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ವೀರಶೈವ/ಲಿಂಗಾಯತವನ್ನು ಕೇಂದ್ರ ಸರಕಾರದ ಓಬಿಸಿ ಪಟ್ಟಿಯಲ್ಲಿ ಸೇರಿಸಲು ನಮ್ಮ ಆಕ್ಷೇಪಣೆ ಇಲ್ಲ. ಆದರೆ ಅದನ್ನು ವೀರಶೈವ ಮತ್ತು ಲಿಂಗಾಯತ ಎಂದು ತಿದ್ದುಪಡಿ ಮಾಡಿಕಳಿಸಬೇಕು ಎಂದು ಸರಕಾರವನ್ನು ಒತ್ತಾಯ ಪಡಿಸುವುದಾಗಿ ಹೇಳಿದರು.

7 thoughts on “ಲಿಂಗಾಯತ ಧರ್ಮದ ಒಳ ಸಮುದಾಯವನ್ನು ಛಿದ್ರ ಮಾಡುತ್ತಿರುವ ಯಡಿಯೂರಪ್ಪ : ಜಾಮದಾರ ಆರೋಪ

 1. ಖಂಡಿತವಾಗಿಯೂ ಇದು ಲಿಂಗಾಯತ ಧರ್ಮಕ್ಕೆ ಮಾಡುವ ಅನ್ಯಾಯ ದ್ರೋಹ ಇದನ್ನು ನಾವು ಖಂಡಿಸುತ್ತೇವೆ

 2. ಸರ್, ೧೯೮೦ ರ ಮೊದಲು ಎಲ್ಲರು ಲಿಂಗಾಯತ ಅನ್ನುವ ಭಾವನೆಯಲ್ಲಿದ್ದರು.ತದನಂತರ ಎಲ್ಲ ಲಿಂಗಾಯತ ಒಳ ಪಂಗಡಗಳನ್ನು ವ್ಯವಸ್ಥಿತ ರೀತಿಯಲ್ಲಿ ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಅರ್ಥಿಕವಾಗಿ ವಿಂಗಡಿಸಿ ಬರಿ ಒಂದು ಒಳ ಪಂಗಡದವರು ಸದುಪಯೋಗ ಪಡಿಸಿಕೊಂಡರು. ಇವಾಗ ಇಡಿ ಲಿಂಗಾಯತ ಒಳ ಪಂಗಡಗಳು ವಿಭಜನೆಯಾಗಿ ಮತ್ತು ಪ್ರತಿ ಒಳ ಪಂಗಡಗಳಿಗೆ ಒಬ್ಬ ಸ್ವಾಮಿ ಮಾಡಿ ಮತ್ತಷ್ಟು ಹದಗೆಡಿಸಿದರು. ಕಾರ ಎಲ್ಲ ಒಳ ಪಂಗಡ ಮರೆತು ಲಿಂಗಾಯತ ಮನತುಂಬಲು ನಿಮ್ಮಂಥ ಮಹಾ ಶಕ್ತಿ ಅವಶ್ಯಕತೆ ಇದೆ. ಇದನ್ನು ಸದುಪಯೋಗ ಪಡಿಸಿಕೊಳ್ಳುವುದು ಹಿರಿಯರ ಮೇಲೆ ಇದೆ.

 3. ಜಾಲಿಂಮಹಾಸಭಾದ ಪ್ರಧಾನ ಕಾರ್ಯದರ್ಶಿ ಮಾನ್ಯ ಡಾ ಶ್ರೀ
  ಎಸ್.ಎಂ.ಜಾಮದಾರ ಅವರ ಈ ಹೇಳಿಕೆಯನ್ನು ನಾನು ಅನುಮೋದಿಸುವುದಲ್ಲದೆ ಬೆಂಬಲಿಸುತ್ತೇನೆ. ಲಿಂಗಾಯತ ಧರ್ಮದ ಒಳಪಂಗಡವಾದ ವೀರಶೈವವನ್ನು ಈ ರೀತಿ ನಿಗಮಸ್ಥಾಪಿಸುವುದರಿಂದಧರ್ಮವನ್ನು ಒಡೆಯದಂತೆ. ಇದರ
  ಬದಲಾಗಿ ಲಿಂಗಾಯತ ಸ್ವತಂತ್ರಧರ್ಮದ ಮಾನ್ಯತೆಗೆ ಕೇಂದ್ರ
  ಸರಕಾರಕ್ಕೆ ಒತ್ತಡ ತರುವುದು ಲಿಂಗಾಯತರಾದ ಮಾನ್ಯ ಮುಖ್ಯ ಮಂತ್ರಿ ಶ್ರೀ ಯಡೆಯೂರಪ್ಪನವರು ಪ್ರಯತ್ನಿಸಿದರೆ ಸಮಸ್ತ ಲಿಂಗಾಯತ ಸಮುದಾಯ ಕೃತಜ್ಞತೆ ಸಲ್ಲಿಸುತ್ತದೆ.

 4. ಜಾಮದಾರ ಅವರ ಹೇಳಿಕೆ ತುಂಬಾ ಸ್ಪಷ್ಟವಾಗಿದೆ
  ಖಂಡಿತಾ ಇವೆಲ್ಲವೂ ಲಿಂಗಾಯತಕ್ಕೆ ಅಲ್ಪಸಂಖ್ಯಾತ ,
  ಸ್ವಾತಂತ್ರದರ್ಮ ತಪ್ಪಿಸಲು ದೂರಾಲೋಚನೆಯ ಹುನ್ನಾರ ನಡೆಯುತ್ತಿದೆ.

 5. Sir… We are all lingyata community support to jamadara sir statement true statement always disturbance to some ignorance people. Now our lingayata young generation know each and every thing. So stand up our coumunity young generation to support our leader…. Jai basaveshware

Leave a Reply

Your email address will not be published.

error: Content is protected !!