ಜಂಗಮವೆಂಬುದು ಅಮೂರ್ತ ಚಲನಶೀಲ ತತ್ವ

ಭಕ್ತ ಅನಾದಿ !! ಜಂಗಮ ಆದಿ ಶಕ್ತಿ ಅನಾದಿ!! ಶಿವನು
ನೋಡಾ ಎನ್ನ !! ಆದಿ ಪಿಂಡ
ಕ್ಕೆ ನೀನೆ ಆಧಾರವಾಗಿ!!ತೋ
ರಿದಡೆ !!ಎನ್ನ ಹೃದಯ
ಕಮಲದಲ್ಲಿ !! ನಿಮ್ಮಕಂಡೆನು
ಆ ಕಾಂಬ !ಜ್ಞಾನವೇ ಜಂಗಮ
ಆ ಜಂಗಮ !!ವಿಡಿದಲ್ಲದೆ
ಲಿಂಗವ ಕಾಣಬಾರದು
ಆ ಜಂಗಮ!!
ವಿಡಿದಲ್ಲದೆ ಗುರುವ ಕಾಣ ಬಾರದು!! ಆ ಜಂಗಮ
ವಿಡಿದಲ್ಲದೆ !!ಪ್ರಸಾದವ
ಕಾಣಬಾರದು!! ಕಾಯ
ಭಕ್ತ .!!ಪ್ರಾಣ ಜಂಗಮ
ವೆಂಬ ವಚನ ತಿಳಿಯಲು
ಎನ್ನ ಪ್ರಾಣ !!ನೀವಲ್ಲದೆ
ಮತ್ತಾರು ಹೇಳಿರಯ್ಯ!!
ಇದು ಕಾರಣ ! ನಿಮ್ಮ
ಘನವ ಕಿರಿದು ಮಾಡಿ
ಎನ್ನನೊಂದು ಘನವ
ಮಾಡಿ !!ನುಡಿವಿರಿ
ಕೂಡಲ ಸಂಗಮ ದೇವ

ಬಸವಣ್ಣನು ಶಿವಶಕ್ತಿಯನ್ನು ಪ್ರಕೃತಿ ತತ್ವದಲ್ಲಿ ಕಾಣುತ್ತಾನೆ. ಪರಶಿವನ ಶಕ್ತಿ ಆದಿ ಶಕ್ತಿ ಯಾಗಿದೆ.ಜಂಗಮನು ಲಿಂಗ ದೇಹದಲ್ಲಿ ದೈವೀ ಸ್ವರೂಪ ಗುಣಗಳನ್ನು ಹೊಂದಿರುವ ಚಿತ್ ಚೈತನ್ಯವುಳ್ಳಂಥವನು. ಈ ಪಿಂಡಾಂಡದಲ್ಲಿ ಜೀವ ಚೈತನ್ಯ ವುಳ್ಳ ಜೀವ ಅಡ ಗಿದೆ. ಈ ಹೃದಯ ಕಮಲ ದಲ್ಲಿ ಅಷ್ಟ ದಳ ಕಮಲ ಇರು ವುದರಿಂದ ಸದಾ ಚಲನ ಶೀಲ ಗತಿಯಲ್ಲಿ ಕಮಲವು ತಿರುಗುತ್ತಿರುತ್ತದೆ. ಇದು ಹೃದಯ ಸ್ಥಾನಕ್ಕೆ ಬಂದಾಗ ತನ್ನ ಬಣ್ಣ ಬದಲಾಗುವುದು. ಆಗ ಮನುಷ್ಯನ ಸ್ವಭಾವ ಗಳು ಬಣ್ಣಗಳಂತೆ ಬದಲಾಗುವುದು.


ಈ ಪಿಂಡಾಂಡದ ಹೃದಯ ಕಮಲದಲ್ಲಿ ಜಂಗಮ ನಿದ್ದಾನೆ. ಸದಾ ಸಂಚಾರಿ ಯಾದ ಜಂಗಮನು ಕಾಯ ದಲ್ಲಿ ಸ್ಥಿರವಾಗಿ ನೆಲೆಗೊಳ್ಳಬೇಕಾದರೆ ಲಿಂಗ ದೇಹಿ ಯಾಗಬೇಕು.ಅಂಗ ಲಿಂಗ ಸಂಬಂದದಲ್ಲಿ ಅಚೇತನ ವೆನಿಸುವ ಲಿಂಗವು ಜಂಗಮ ಸಹಿತ ಚೈತನ್ಯ ವಾಗಿ ಸ್ಪುರಿ ಸುತ್ತಿರ ಬೇಕು.ಇದುವೇ ಜಂಗಮ ವೆನ್ನುವ ಜ್ಞಾನ ವಾಗುವುದು.ಭಕ್ತನ ಲಿಂಗಾಂಗ ಸಾಮರಸ್ಯಕ್ಕೆ ಅತೀತನಾಗುವನು.


ಈ ಜಂಗಮ ವಿಡಿದಲ್ಲದೆ ಪ್ರಸಾದವ ಕಾಣಬಾರದು ಎನ್ನುವ ನಿವೇದನೆ ಬಸವಣ್ಣ ನದು …ತತ್ವವನ್ನು ಘನೀಕ ರಿಸುವ ಆಶಯದಲ್ಲಿ ಲಿಂಗ ಮುಖದಿಂದ ಬಂದದ್ದು ಪ್ರಸಾದ.ಜಂಗಮನಿಗೆ ಅರ್ಪಿ ತವಲ್ಲದ ಪ್ರಸಾದ ಭಕ್ತನು ಸ್ವೀಕರಿಸುವಂತಿಲ್ಲ.

ಗುರುಮುಖೇನ ಬಂದುದು ಶುದ್ದ ಪ್ರಸಾದ ..ಲಿಂಗಮುಖ ದಿಂದ ಬಂದುದು ಸಿದ್ದ ಪ್ರಸಾದ ..ಜಂಗಮ ಮುಖ ದಿಂದ ಬಂದುದ್ದು ಪ್ರಸಿದ್ದ ಪ್ರಸಾದ .. ಶುದ್ದ ಪ್ರಸಾದದಿಂದ ತನುವು ಸಿದ್ದ ಪ್ರಸಾದ ದಿಂದ ಮನವು ಪ್ರಸಿದ್ದ ಪ್ರಸಾದ ದಿಂದ ಪ್ರಾಣವು ಶುದ್ದವಾಗುತ್ತದೆ. ಇದನ್ನೇ ಬಸವಣ್ಣ ಹೇಳು ವುದು ಕಾಯ ಭಕ್ತ ಪ್ರಾಣ ಜಂಗಮ ವೆಂಬ ವಚನವ ತಿಳಿಯಲು

ಶರಣರ ಪ್ರಕಾರ ಜಂಗಮವೇ ಬದುಕು.ಜಂಗಮವಾಗಿ ರದಿದ್ದರೆ ಸ್ಥಾವರಗೊಂಡರೆ ಸಾವು.ಶರಣರು ಪ್ರಾಣವೇ ಆದ ಜಂಗಮನನ್ನು ಅನುಭವಿಸಿದ್ದರು.ಅವರ ಪ್ರಕಾರ ಅನುಭಾವದಲ್ಲಿ ಅನುಭವಿಸಬೇಕೆ ಹೊರತು ವಿವರಿಸಲಾಗದು.

ಎನ್ನ ಪ್ರಾಣ ನೀವಲ್ಲದೆ ಮತ್ತಾರು ಹೇಳಯ್ಯ ಎನ್ನುವ ಯುಕ್ತಿಯನ್ನು ಮುಂದಿಡುವ ಬಸವಣ್ಣನು ಪ್ರಾಣಲಿಂಗದ ಪೂಜೆಯನ್ನು ಭಾವ ಪುಷ್ಪಗಳಿಂದ ಅಲಂಕರಿಸುತ್ತಾನೆ.ಮುಂದೆ ಇದು ಕಾರಣನಿಮ್ಮ ಘನವ ಕಿರಿದು ಕಿರಿದು ಮಾಡಿ ಎನ್ನ ನೊಂದು ಘನವ ಮಾಡಿ ನೋಡುವಿರಿ. ಬಸವಣ್ಣನು ಸಾಮಾನ್ಯ ಶಬ್ದ ಗಳ ಮೂಲಕ ಲಿಂಗವೆ ಜಂಗಮ ವೆಂದು ಹೇಳುತ್ತಾ ಲಿಂಗದ ಮೂಲಕ ಹಿರಿದಾದ ಸ್ಥಾನವನ್ನು ಜಂಗಮಕ್ಕೆ ಕೊಡುತ್ತಾರೆ. ನಿಮ್ಮ ಘನ ವೆನ್ನುವಲ್ಲಿ ಲಿಂಗವೇ ಜಂಗ ಮ ವಾದ್ದರಿಂದ ಲಿಂಗ ಪೂಜೆ ಮಾಡ ಬೇಕಲ್ಲದೆ ತನ್ನನ್ನೇ ತಾನು ಪೂಜಿಸಿ ಕೊಳ್ಳುವುದಲ್ಲ.

ಬಸವಣ್ಣನ ಪ್ರಕಾರ ಜಂಗಮ ಅಮೂರ್ಥ ಚಲನ ಶೀಲತೆ ಯ ತತ್ವ . ಲಿಂಗ ಜಂಗಮ ದ ಕುರುಹು.ಸಾಮಾಜಿಕ ಶಕ್ತಿಯ ಭಾವುಕ ದಶ೯ನ. ಎಲ್ಲವೂ ಜಂಗಮವೇ ಚೈತನ್ಯ ವನ್ನು ಅರಿವಾಗಿಸಿ ಕೊಂಡಾಗ ಸಂವೇದನಾಶೀಲ ತೆ ಉಂಟಾಗುತ್ತದೆ.ಜಂಗಮ ಚಲನೆಗೆ ಆದಿಯೂ ಇಲ್ಲ್ಲ ಅಂತ್ಯವೂ ಇಲ್ಲ.ಹೀಗಾಗಿ ಜಂಗಮ ತತ್ವವೆನ್ನುವುದು ಆಧ್ಯಾತ್ಮಿಕ ಸಂಕಲ್ಪದ ಸಾಮಾನ್ಯ ರೂಪ…
ಬಸವಣ್ಣನ ಭಾವುಕ ಭಕ್ತಿಯು ಎನ್ನನೊಂದು ಘನ ವ ಮಾಡಿ ನುಡಿವಿರಿ.

ಡಾ. ಸರ್ವಮಂಗಳ ಸಕ್ರಿ

Leave a Reply

Your email address will not be published. Required fields are marked *

error: Content is protected !!