ನನ್ನ ಮಗ ನಮ್ಮೂರ ಸ್ವಾಮಿಗಿಂತ ಮಿಗಿಲು

ಉತ್ತರ ಕರ್ನಾಟಕದಲ್ಲಿ ಒಬ್ಬ ಎಂಜನೀಯರಿಂಗ್ ಪದವೀಧರ , ತಂದೆ, ತಾಯಿಯ ಮಧ್ಯೆ ನಡೆದ ಕುತೂಹಲಕರ ಸಂಭಾಷಣೆ

ಅಪ್ಪ – ಯಾಕೋ ? ಕ್ಯಾಂಪಸ್ ಇಟಂರ್ ವೀವ್ ನಲ್ಲಿ TCS company offer ಮಾಡಿದ ಸಾಫ್ಟವೇರ್ ಇಂಜನೀಯರ್ ಹುದ್ದೆ ತಿರಸ್ಕರಿಸಿದೆಯಂತೆ ?

ಮಗ – ಅಪ್ಪ ನಾನು ಓದಿದ್ದು ಮೆಕ್ಯಾನಿಕಲ್ ‌ಎಂಜನಿಯರ್ , ನನಗೆ ನಾನು ೪ ವರ್ಷ ಓದಿದ ಮೆಕ್ಯಾನಿಕಲ್ ‌ಫೀಲ್ಡ‌ನಲ್ಲಿಯೇ ಉದ್ಯೋಗ ಬೇಕಪ್ಪಾ , ನಾನು ಕಾಯ್ತೀನಿ , ಸಂಬಳ ಕಡಿಮೆ ಇದ್ರೂ ನಾನು ಓದಿದ ಮೆಕ್ಯಾನಿಕಲ್ ‌ಫೀಲ್ಡ‌ನಲ್ಲೇ ಕೆಲಸ ಹುಡುಕಬೇಕು‌ ಅಂತ ಅನಿಸ್ತಿದೆ ಅಪ್ಪಾ

ಅಪ್ಪ – ಧೀರ್ಘ ಉಸಿರು ತಗೊಂಡು ನೀನೇ ಕರೆಕ್ಟ , ನೀನು ೪ ವರ್ಷ ಓದಿದ ಫೀಲ್ಡ‌ನಲ್ಲೇ ಮುಂದುವರೆ , ನಿನಗೆ ಆಸಕ್ತಿ , ಶ್ರಧ್ದೆ ಇದ್ದ ಕ್ಷೇತ್ರದಲ್ಲೇ ಮುಂದುವರೆ

ಅವ್ವ- ಎಲ್ಲಿ ನನ್ನ ಮಗನಿಗೆ ನೀವು ಬೈತೀರೋ ಅನ್ಕೊಂಡಿದ್ದೆ , ಈಗ ಮನಸ್ಸು ಹಗುರಾಯ್ತು , ಚಲೋ ಆಯ್ತ , ಮಗ ನೀನು ಹೋಗಿ‌ ನಮ್ಮ ಊರಿಗೆ ಹೊಸದಾಗಿ ಬಂದ ವಿರಕ್ತ ಸ್ವಾಮಿಗಳ ಆಶೀರ್ವಾದ ತಗೊಂಡು ಬಾ

ಅಪ್ಪ – ನನ್ನ ಮಗ ಆ ಸ್ವಾಮಿ ಕಾಲ ಮುಗಿದು ಬ್ಯಾಡ , ನನ್ನ ಮಗ ನಮ್ಮೂರು ಸ್ವಾಮಿಗಿಂತ ನೀನೆ ಉತ್ತಮ , ಅದರ ಬಗ್ಗೆ ಹೆಮ್ಮೆ ಇದೆ ಆ ಹೊಸದಾಗಿ ವಿರಕ್ತ ಲಿಂಗಾಯತ ಮಠಕ್ಕೆ ಬಂದ‌ಸ್ವಾಮಿ , ೫ ವರ್ಷ ಶಿವಯೋಗ ಮಂದಿರದಲ್ಲಿ ವೈದಿಕ, ಜ್ಯೋತಿಷ್ಯ ‌ಕಲಿತು , ದುಡ್ಡಿನ ಆಸೆಗೆ ಅವೈದಿಕ ಶರಣರ ಪರಂಪರೆಯ ಲಿಂಗಾಯತ ವಿರಕ್ತ ಮಠಕ್ಕೆ ಸ್ವಾಮಿಯಾಗಿ ಬಂದಾನ

ಆ ಸ್ವಾಮಿಗೆ ಸ್ವಲ್ಪರ ಸ್ವಾಭಿಮಾನ ಇದ್ರ ಹೋಗಿ ಯಾವ್ದರ ಗುಡಿಯಾಗೋ, ಅರಳಿಕಟ್ಟಿಗೋ ಇಲ್ಲಂದ್ರ ಅದೇ ವೀರಶೈವರ ಮಠಕ್ಕೆ ಹೋಗಿ ೫ ವರ್ಷ ಕಲಿತಿದ್ದ ವೇದ, ಪಂಚಾಂಗ ಹೇಳ್ಕೊಂತು ಕುಂದರಬೇಕಿತ್ತು , ಇಲ್ಲಿ ಲಿಂಗಾಯತ ಮಠದ ರೊಕ್ಕದ ನೋಡಿ ತನಗ ತಾನೇ ವಂಚನೆ ಮಾಡ್ಕೊಂಡಾನ , ಈ‌ನಮ್ಮೂರು ದಡ್ಡ ಗೌಡ್ರಗೆ, ಶೆಟ್ರ ತಲಿಯಾಗ ಸಗಣಿ ತುಂಬೈತಿ, ಇಂತವ್ನ ಪಟ್ಟಾಧಿಕಾರ ಮಾಡಿ‌ ತಲೆ ಮ್ಯಾಗ ಇಟ್ಕೊಂತಾವ

ಹಂಗಾಗಿ ನನ್ನ ಮಗ ಹೋಗಿ ಆ ಸ್ವಾಮಿ ಆಶೀರ್ವಾದ ತಗೊಳ್ಳುದು ಬ್ಯಾಡ , ಬೇಕಿದ್ರ ಆ ಸ್ವಾಮಿಗೆ ತನ್ನದೇ ಉದಾಹರಣೆ ನೀಡಿ‌ ಪೀಠ ತ್ಯಾಗ ಮಾಡಕ ಹೇಳಿ ಬರ್ಲಿ ಅವ , ಅಷ್ಟು ದೈರ್ಯ ಐತಿ ನನ್ನ ಮಗ್ಗ ಅಂತ ತಿಳ್ಕೊಂಡೀನಿ

ಮಗ- 😊 ಬೇ ಅವ್ವ, ಈ ಹೊಸ ಸ್ವಾಮಿಗಳು ಹಿಂಗ ದುಡ್ಡಿಗಾಗಿ ಫೀಲ್ಡ ಚೆಂಜ್ ಮಾಡ್ಕೊಂಡವರು ಅಂದ್ರ , ಆ ಸ್ವಾಮಿಗಳನ್ನು ಹಾಗೂ ಅವರನ್ನು ಕರ್ಕೊಂಡ ಬಂದ‌ ಈ‌ ಊರ ಗೌಡ್ರ , ಶೆಟ್ಟರನ್ನ ಎಲ್ಲರನ್ನೂ ಸರಿಯಾಗಿ ತಡವ್ತೀವಿ ಹುಡುಗುರು ಎಲ್ಲಾ ಸೇರಿ

ಅವ್ವ – ಅಪ್ಪ, ಮಗ‌ ಸೇರಿ ಆ ಹೊಸ ಸ್ವಾಮಿನ್ನ ಓಡಿಸ್ತೀರೇನೋ‌? 🤦‍♂️

ಶಾಂತಕುಮಾರ ಹರ್ಲಾಪುರ

2 thoughts on “ನನ್ನ ಮಗ ನಮ್ಮೂರ ಸ್ವಾಮಿಗಿಂತ ಮಿಗಿಲು

  1. ಆತ್ಮವಂಚಕ ಸ್ವಾಮಿಗಳು ಎಲ್ಲೆಡೆ ತುಂಬಿದ್ದಾರೆ.. ವೇದ ಪಂಚಾಂಗ ಹೋಮ-ಹವನ ಮಾಡುವ ಸ್ವಾಮಿಗಳಿಗೆಕೆ ಲಿಂಗಾಯತ ಧರ್ಮದ ವಿರಕ್ತ ಪೀಠಗಳು? ಈಗ ಸ್ವಾಮಿಗಳು ಪರಿವರ್ತನೆ ಆಗಬೇಕು ಇಲ್ಲವೇ ಜನ ಪರಿವರ್ತನೆಯಾಗಬೇಕು… ಕಾಯ್ದು ನೋಡೋಣ ಲಿಂಗಾಯತ ಧರ್ಮಿಯರ ನಡೆಯನ್ನು.

  2. ಜಾಗೃತಿಯೆಂಬ ಇಂಥಹ ಬೆಳಕು ಎಲ್ಲೆಡೆಯೂ ಪಸರಿಸಬೇಕು.

Leave a Reply

Your email address will not be published. Required fields are marked *

error: Content is protected !!