ಅನ್ನಭಾಗ್ಯ ನೀಡಿದ್ದ ಸಿದ್ದರಾಮಯ್ಯ

ಉಚಿತ ಅಕ್ಕಿ ಜನರನ್ನು ಸೋಮಾರಿ‌ ಮಾಡುತ್ತೆ , ದುಡಿದೇ ಬದುಕಬೇಕು , ಏನನ್ನೂ ಉಚಿತವಾಗಿ ಕೊಡಬಾರದು, ಮಧ್ಯಮ ವರ್ಗಗಳಿಂದ ಬೆಂಗಳೂರಿಗೆ ವಲಸೆ ಬಂದು‌ ಸಾಫ್ಟವೇರ್ ಇಂಡಸ್ಟ್ರಿ ಸೇರಿದ ನಂತರ ಅನೇಕರು ಹೇಳುವ ಈ ಮಾತಿಗೆ ನನ್ನ ಸರಳ ಉತ್ತರ.

ಹಳ್ಳಿಯ ಸಂಕೀರ್ಣ ವ್ಯವಸ್ಥೆ, ಹೆಣ್ಣುಮಕ್ಕಳ ಸ್ಥಿತಿಗತಿ , ಕುಟುಂಬದ ‌ಕಟ್ಟಳೆ , ಮಕ್ಕಳಿಲ್ಲದ ಅಥವಾ ಮಕ್ಕಳೆದುರು ಊಟಕ್ಕಾಗಿ ಅಂಗಲಾಚುವ ವಯಸ್ಸಾದ ವ್ರದ್ದರ ಪರಿಸ್ಥಿತಿ ಇರುವ ನಾಡಿನ ವಾಸ್ತವ ಪ್ರಪಂಚದ ಅರ್ಥ‌ಮಾಡಿಕೊಳ್ಳಬೇಕು.

ಹಳ್ಳಿಗಳಲ್ಲಿ ಬಹಿಷ್ಕಾರ ‌ಹಾಕುವ ಪಧ್ದತಿ ಇರುವುದರಿಂದ ಕೆಲವರಿಗೆ ಕೆಲಸಕ್ಕೆ ಕರೆಯದೇ ತಾರತಮ್ಯ ಮಾಡುವ ಗೋಜು ಇರುವುದರಿಂದ , ನಿರ್ದಿಷ್ಟ ಜನರನ್ನು ಕೆಲವು ಕೆಲಸಕ್ಕೆ ಕರೆಯದೇ ಹೋಗುವುದರಿಂದ , ಇದನ್ನು‌ ಮೀರಿ ಮಳೆ ಆಧಾರಿತ ಕ್ರಷಿಯಲ್ಲಿ ಕೆಲಸವೇ ಸಿಗದ ನಾಲ್ಕಾರು ತಿಂಗಳ ಸಂಧರ್ಬದಲ್ಲಿ , ಎಲ್ಲರಿಗೂ ವಲಸೆ ಹೋಗಲು ಆಗುವುದಿಲ್ಲ

ಹಾಗಾಗಿ ಕೆಲಸ ಮಾಡುವ ಮನಸ್ಸಿದ್ದರೂ ಹಸಿವಿನಿಂದ ಬಳಲಿ ಯಾರೂ ಮಲಗಕೂಡದು ಎಂದು ಕೊಡಮಾಡುವ ಅನ್ನಭಾಗ್ಯ ಉಚಿತ ಅಕ್ಕಿ ನೀಡಿದ್ದು ಉದಾತ್ತ ಮಾನವೀಯ ಯೋಜನೆ .

 

ಅಕ್ಕಿ ಉಚಿತವಾಗಿ ಸಿಕ್ಕ ಕೂಡಲೇ ಜನ ಸೋಮಾರಿಯಾಗುತ್ತಾರೆ ಎನ್ನುವ ವಾದವನ್ನು ನಾನು ಒಪ್ಪುವುದೇ ಇಲ್ಲ , ಜನ‌ಕೆಲಸದ ಸಮಯ, ಕೂಲಿ‌ನಿರ್ಧರಿಸುತ್ತಿದ್ದಾರೆ ,‌ಮೊದಲಿನ ತರಹ ಹೊಲ ಇರುವ‌ ಮಾಲೀಕರ ಮಾತು ಕೇಳದೇ ಸ್ವಾಭಿಮಾನದಿಂದ ಆಯ್ಕೆ ಮಾಡುತ್ತಿದ್ದಾರೆ ಅಷ್ಟೇ , ಇದು ಹೊಲ ಇದ್ದು ಕೆಲಸ ಮಾಡದ ಹಾಗು ಕೂಲಿ‌ ಕೆಲಸ ಮಾಡುವವರ‌ ನಡುವಿನ ನಿತ್ಯ‌ಮಾತುಕತೆ ,‌ನಾನು‌ಕೂಲಿ ಕೆಲಸ ಮಾಡುವವರ ಪರವೇ. *ಹೊಲ ಇದ್ದವರಿಗೆ ಕೂಲಿ ಕೆಲಸದವರನ್ನು ಮೊದಲಿನ ಹಾಗೆ ದಬಾಯಿಸಲು ಆಗ್ತಾ ಇಲ್ಲ ಎನ್ನುವ ನೋವು* ನನಗೆ ಪ್ರತಿ ಬಾರಿಯೂ ಕಾಣುತ್ತೆ.

ಇನ್ನು ಗಂಡ ಸತ್ತ‌ನಂತರ, ಅಥವಾ‌ ಗಂಡ ಇದ್ದರೂ ಕುಡಿದು ಓಡಾಡಿ ಬೇಜವಾಬ್ದಾರಿ ಇರುವವರ ಮಧ್ಯೆ , ಹಳ್ಳಿಗಳಲ್ಲಿನ ವ್ರದ್ದರು ಸ್ವಾಭಿಮಾನದಿಂದ ಬದುಕಲು ,‌ ಬಡತನದಲ್ಲಿ ತಾಯಂದಿರು ಮಕ್ಕಳನ್ನು ಸಾಕಲು ಹರಸಾಹಸ ಮಾಡುವ ತಾಯಂದಿರನ್ನು ನಾನು ಸ್ವತಃ ನೋಡುತ್ತಿರುತ್ತೇನೆ , *ತಮ್ಮ ಮಕ್ಕಳು ಹಸಿವಿನಿಂದ ಮಲಗಕೂಡದು ಎನ್ನುವುದೊಂದೇ ಅವರ ಆಸೆಯಾಗಿರುತ್ತೆ ಅಂತವರಿಗೆಲ್ಲ ಈ ಅನ್ನಭಾಗ್ಯ ಆಸರೆ* ಅಕ್ಕಿ ಒಂದಿಷ್ಟಿಂದ್ದರೆ ಏನೋ‌ ಮಾಡಿಕೊಂಡು ಉಣ್ಣುತ್ತಾರೆ , ಕೊನೆ ಪಕ್ಷ ಹಸಿವಿನಿಂದ‌ ಮಲಗಿಸುವುದಿಲ್ಲ , ವಯಸ್ಸಾದ ನಂತರ ವ್ರದ್ದರು ಮಕ್ಕಳ ಮೇಲೆ ಅವಲಂಬಿತ ಕ್ಷಣದಲ್ಲಿ ಯಾವುದೇ ಸುರಕ್ಷತೆಯಿಲ್ಲದ ಬದುಕುವ ವ್ರದ್ದರು ಹೊತ್ತಿನ ಊಟಕ್ಕೂ ನಿರ್ಲಕ್ಷಕ್ಜೋಳಗಾಗುವುದು ಕೂಡ ವಾಸ್ತವ, ಹಾಗಾಗಿಯೇ ನಾನು ಈ ಉದಾತ್ತ ಯೋಜನೆಯನ್ನು ಮಾನವೀಯ ದ್ರಷ್ಟಿಯಿಂದ ಸದಾ ಬೆಂಬಲಿಸಿದ್ದೇನೆ ,

ಮಠ ಮಂದಿರಗಳು, ಸಾಮಾಜಿಕ ಸಂಸ್ಥೆಗಳು ಕೊಡಮಾಡುವ ಉಚಿತ ಪ್ರಸಾದವನ್ನು ಕೆಲಸಕ್ಕೆ ಮಿತಿಯಿದೆ, ಎಲ್ಲರಿಗೂ ಅಥವಾ ಅವಶ್ಯವಿದ್ದವರಿಗೆ ತಲುಪಿಸಿದ್ದು ಕಡಿಮೆಯೇ, ಹೊಟ್ಟೆ ತುಂಬಿದ‌‌ಜನ ಕಾರು ಬೈಕುಗಳಲ್ಲಿ ಬಂದು ಮಠದ ಮಂದಿರದ ಪ್ರಸಾದ ಸೇವಿಸಿ ದಾಸೋಹ ವನ್ನು ಹೊಗಳುವವರಿಗೆ ಅನ್ನಭಾಗ್ಯ ಯೋಜನೆ ಖಂಡಿಸುತ್ತಾರೆ ಎಂದರೆ ಇವರಿಗೆ ಯಾವ ಕಾಯಕ, ದಾಸೋಹ, ಧರ್ಮ ಅರ್ಥವಾಗುತ್ತೆ ? ದಾಸೋಹ ನಡೆಸಿದ ಮಠದ ಸ್ವಾಮೀಜಿಗಳ ಕಾರ್ಯ ಶ್ಲಾಘನೀಯ ಆದರೆ ಸರ್ಕಾರದ ಅನ್ನಭಾಗ್ಯ ಯೋಜನೆ ರೂವಾರಿ ಶ್ಲಾಘನೀಯವಿಲ್ಲವೇ ?

ಸರ್ಕಾರದ ಅನ್ನಭಾಗ್ಯ ಯೋಜನೆ ಯಾರೂ ಹಸಿವಿನಿಂದ ಮಲಗಕೂಡದು ಎನ್ನುವ ಯೋಜನೆ, ಆಲೋಚನೆಯೇ ಬಹುದೊಡ್ಡ ಮಾನವೀಯ‌ ದಾಸೋಹದ ಕೆಲಸ , ಇದು ಕಟ್ಟಕಡೆಯ ವ್ಯಕ್ತಿಯನ್ನು ತಲುಪಿದ ಮಹಾದಾಸೋಹ , ಸಹಜವಾಗಿ ಈ ಯೋಜನೆಯ ಹಿಂದಿನ ರೂವಾರಿಯ ಬಗ್ಗೆ ಗೌರವ ಮೂಡುತ್ತೆ , ಇದೇ ದಾಸೋಹದ ಕೆಲಸ ಮಾಡಿದ ಸ್ವಾಮೀಜಿಗಳನ್ನು ದೇವರೆಂದು ಕರೆದ ಜನ ಈ ಅನ್ನಭಾಗ್ಯದ ರೂವಾರಿಗೆ ಕೊನೆ ಪಕ್ಷ ಗೌರವ ವಂದನೆ ಸಲ್ಲಿಸದೆ ಹೋದರೆ ಅದು ಮನದೊಳಗಣ ಕಿಚ್ಚು ಎಂದೇ ಹೇಳುತ್ತೇನೆ.


ಜನರನ್ನು ಸದ್ರಡವಾಗಿಸುವ , ಉಚಿತ ಯೋಜನೆಗಳನ್ನು‌ ಕೊಡುವ ಮೂಲಜ ರಾಷ್ರಗಳನ್ನು ಬಲಿಷ್ಟ ಮಾಡಲಾಗುತ್ತೆ ,
ಇದನ್ನೇ ಮುಂದುವರಿದ ರಾಷ್ರಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಮಾಡುತ್ತಾರೆ , ಅಮೇರಿಕದಲ್ಲಿ ಕೋವಿಡ್ ಸಂಧರ್ಬದಲ್ಲಿ ಪ್ರತಿಯೊಬ್ಬ ನಾಗರುಕನಿಗೆ ೩ ಲಕ್ಷ ರೂಪಾಯಿ‌ಕೊಡಲಾಗಿತ್ತು , ಅವರು ಅದನ್ನು ವಾಪಸು ಖರ್ಚು ಮಾಡಿದ್ದಕ್ಕೆ ಅಲ್ಲಿನ ಆರ್ಥಿಕತೆ ಬೆಳೆದದ್ದು , ಇದು ಎಕನಾಮಿಕ್ಸ ರೀತಿಯಿಂದ ನೋಡುವ ದ್ರಷ್ಟಿ, ಜನರು‌ ಸದ್ರಡರಾದಾಗ ಆರ್ಥಿಕ ವ್ಯವಸ್ಥೆ ಸದ್ರಡವಾಗುತ್ತೆ ಕೂಡ.

ಇಂದು ಅನ್ನ ಊಟ ಅತ್ಯಂತ ಸಾಮಾನ್ಯ ಅವಶ್ಯಕ , ಒಂದು ದೇಶವಾಗಿ ನಾವು ನಮ್ಮ ಎಲ್ಲ ನಾಗರಿಕರು ಹಸಿವಿನಿಂದ ಇರಕೂಡದು ಎನ್ನುವ ಯೋಜನೆಯನ್ನು ಮಾನವೀಯ ದ್ರಷ್ಟಿಯಿಂದಲೇ ನೋಡಬೇಕು ಎನ್ನುವುದು ನನ್ನ ಸಹಮತ, ಅನ್ನಭಾಗ್ಯ ,‌‌ಗರ್ಭಿಣಿಯರಿಗೆ ಫೌಷ್ಟಿಕ ಊಟದ ಯೋಜನೆ ಉದಾತ್ತ ಯೋಜನೆಗಳು‌ಮಹಾದಾಸೋಹದ ಯೋಜನೆಗಳು, ಆ ಯೋಜನೆಯ ರೂವಾರಿಗೆ ಶರಣು ಶರಣಾರ್ಥಿ.

ಶಾಂತಕುಮಾರ ಹರ್ಲಾಪುರ.

2 thoughts on “ಅನ್ನಭಾಗ್ಯ ನೀಡಿದ್ದ ಸಿದ್ದರಾಮಯ್ಯ

  1. ಸರಿಯಾದ ನೆಲೆಯ ಗ್ರಹಿಕೆ ಸರ್. ಅನ್ನವನ್ನು ಕೇವಲ ಆಹಾರವಾಗಿ ನೋಡದೆ ಪ್ರಸಾದವಾಗಿ ನೋಡುವ ಭಾವನೆ ಇನ್ನು ನಮ್ಮ ಭಾರತೀಯ ಮನಸ್ಸುಗಳಲ್ಲಿ ಹೆರಳವಾಗಿರುವದು ವ್ಯಾಪಕವಾಗಿ ಕಂಡುಬರುತ್ತದೆ. ಬಡತನವನ್ನು ನಿರ್ಧರಿಸುವ ಮೂಲಾಂಶಗಳಲ್ಲಿ ಆಹಾರವು ಒಂದಾಗಿದೆ. ಹಾಗಾಗಿ ಆಹಾರವು ಒಂದು ದೊಡ್ಡ ಸಮಸ್ಯೆಯಾಗಿರುವದು ಆಫ್ರಿಕಾದಂತಹ ಖಂಡ ಮತ್ತು ಸೋಮಾಲಿಯಾ, ಇತಿಯೋಪಿಯಾದಂತಹ ಹಲವು ದೇಶ ಗಳಲ್ಲಿ ಸಾಮಾನ್ಯವಾಗಿ ಕಾಣಬಹುದು. ಮಾನವನ ಮೂಲಭೂತ ಜೀವನಕ್ಕೆ ಹೊಟ್ಟೆ ಬಟ್ಟೆ ಬಹಳ ಮುಖ್ಯವಾಗುತ್ತದೆ. ಹಾಗಾಗಿ ನಾಡಿನ ಯಾವುದೆ ಹಸಿವಿನಿಂದ ಕಂಗೆಡಬಾರದು ಎನ್ನುವ ಮಾನವೀಯ ಸೆಲೆಯಿಂದ ಜಾರಿಯಾದ ಕಾರ್ಯಕ್ರಮವೆ ಅನ್ನ ಭಾಗ್ಯ ಎನ್ನುವ ಲೇಖಕರ ನಿಲುವು ಸತ್ಯದ ಪ್ರತಿಪಾದನೆಯಾಗಿದೆ. ವಿರೋಧಕ್ಕಾಗಿ ಮಾತನಾಡದೆ, ಅಂತಕರಣದಿಂದ ನೋಡುವ ಮನೋ ಔದಾರ್ಯ ಇಂದಿನ ಜನಸಮುದಾಯಗಳಲ್ಲಿ ಬರಬೇಕಾಗಿದೆ ಒಳ್ಳೆಯ ಲೇಖನವನ್ನು ಪ್ರಕಟಿಸಿದ್ದಿರಿ ಸರ್ 🙏👌👍

  2. It is very needed project and only those can understand about Anna Bhagya who felt and seen the poverty. This April I went to Sangli (Maharashtra) for my mother’s surgery and I was there for 5 days. I met lot of people who came from different part of Maharashtra as well as Karnataka. The marati people were talking about Anna Bhagya and Indira canteen projects of Karnataka govt. Anna Bhagya is giving food to many people. Very good article and Thank you for bringing me to Basava Marga website.

Leave a Reply

Your email address will not be published.

error: Content is protected !!