ಪಂಚಾಚಾರ್ಯರ ಪೂರ್ವಾಗ್ರಹಗಳು !

ಸನಾತನವಾದಿ ‘ಪಂಚಾಚಾರ್ಯರ ಪೂರ್ವಾಗ್ರಹಗಳು’..!

ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಡ ಹಾಗೂ ಚಲನಶೀಲ ಚಿಂತನೆಯ ಮಧ್ಯೆ ಯಾವತ್ತೂ ಸಂರ್ಘಷ ನಡದೇ ಇದೆ. ಸ್ಥಾವರವಾದಿಗಳ, ಸನಾತನಿಗಳ ಧಾಳಿ ನಿರಂತರವಾಗಿ ಚಲನಶೀಲ ಚಿಂತನೆಗಳ ಮೇಲೆ ಇದೆ. ಈ ಸಂಘರ್ಷದ ಇತಿಹಾಸದಲ್ಲಿ ಪುರೋಹಿತಶಾಹಿ ವ್ಯವಸ್ಥೆ ತನಗೆದುರಾದ ಪ್ರಗತಿಪರ ಚಿಂತನೆಗಳ ಜೊತೆಯಲ್ಲಿ ಸಂಘರ್ಷ ಮಾಡಿಕೊಂಡೇ ಬಂದಿದೆ. ಆ ಚಿಂತನೆಗಳು ಪ್ರಬಲವಾಗಿ ಸಾಮಾಜಿಕ ನೆಲೆ ಪಡೆದಾಗ ಒಳಹೊಕ್ಕು ‘ಇರಿ’ಯುವ ತಂತ್ರ ಅನುಸರಿಕೊಂಡು ಬಂದಿದೆ. ಅಂತಹ ಕುತಂತ್ರಗಳಿಗೆ ಹಲವಾರು ಪ್ರಗತಿಪರ ಚಿಂತನೆಗಳೂ ಬಲಿಯಾಗಿವೆ. ಅದಕ್ಕೆ ಕಾರಣ ಪ್ರತಿಗಾಮಿ ಧರ್ಮ, ಚಿಂತನೆ ಯಾವತ್ತೂ ವ್ಯವಸ್ಥೆಯ ಆಧಿಪತ್ಯವನ್ನು ತಮ್ಮ ಜೊತೆಗಿಟ್ಟುಕೊಂಡಿರುತ್ತದೆ.

ಅಪ್ಪ ಬಸವಣ್ಣನವರು

ಅರಮನೆ-ಗುರುಮನೆ ಒಂದಕ್ಕೊಂದು ಪೂರಕವಾಗಿಯೇ ಬೆಳೆದು ಬಂದಿವೆ. ಪರಿಣಾಮ ಇಂದು ಧರ್ಮ ಮತ್ತು ರಾಜಕಾರಣ ಒಂದಕ್ಕೊಂದು ಶಕ್ತಿ ಸಂಚಯದ ಅಂತಃ ಸಂಬಂಧ ಪಡೆದಿದೆ. ಹೀಗೆಯೇ ಇಂದಿನ ಧರ್ಮ ಹಾಗೂ ರಾಜಕಾರಣ ಒಂದಕ್ಕೊಂದು ಶಕ್ತಿ ಸಂಚಯದ ಅಂತಃ ಸಂಬಂಧ ಪಡೆದಿದೆ. ಹೀಗೆಯೇ ಇಂದಿನ ಧರ್ಮದ, ‘ಜಗದ್ಗುರು’ಗಳ ಚಟುವಟಿಕೆಗಳು ಕನಿಷ್ಠ ತನ್ನದೇ ಧರ್ಮದ ಸರ್ವ ಜನರ ಒಳಿತನ್ನೂ ಬಯಸದೇ, ಕಂದಾಚಾರ ಪಾಲನೆಯಲ್ಲಿ ಜನರ ನೋವು, ದುಃಖ ನಿವಾರಣೆಗೆ ಯತ್ನಿಸದೇ ಶಾಂತಿ-ನೆಮ್ಮದಿಯನ್ನೂ ಬಯಸದೇ, ಕಂದಾವರ-ಮೌಢ್ಯಗಳನ್ನು ಜನರ ಮೇಲೆ ಹೇರುತ್ತಲೇ ತಮ್ಮ ಅಸ್ತಿತ್ವ ಉಳಿಸಿಕೊಳ್ಳುತ್ತವೆ. ತಮ್ಮ ಅಸ್ತಿತ್ವಕ್ಕಾಗಿ ಹುಸಿ ಆಚರಣೆಗಳು, ಡಂಬಾಚಾರಗಳ ಮುಖಾಂತರ ತಾನು ಇನ್ನೊಂದು ಧರ್ಮಕ್ಕಿಂತ ಶ್ರೇಷ್ಠ ಎಂದನ್ನು ಸಾಧಿಸ ಹೊರಟಿವೆ. ಆ ಶ್ರೇಷ್ಠತೆಯನ್ನು ನಂಬಿಸಲು ‘ಅನಾದಿ, ಜಗದಾದಿ ಲಿಂಗೋಬದ್ವ’ಗಳ ಕತೆ ಕಟ್ಟಿಕೊಂಡಿವೆ. ಇವೆಲ್ಲ ಶ್ರೇಷ್ಟತೆಯ ಪ್ರದರ್ಶನಕ್ಕಾಗಿ ನಡೆಯುವಂಥವು. ನಾನು ಶೇಷ್ಠ, ನನ್ನ ಧರ್ಮವೇ ಶ್ರೇಷ್ಠ ಸಾಧಿಸಹೊರಟಿವೆ. ಆ ಶ್ರೇಷ್ಠತೆಯನ್ನು ನಂಬಿಸಲು ಅನೇಕಾನೇಕ ‘ಹುಸಿ ಪ್ರಹಸನ’ ನಡೆಸುತ್ತವೆ. ನನ್ನ ಕೆಳಗೆ ಇನ್ನೊಂದು ಧರ್ಮ, ಕನಿಷ್ಠವಾದುದಿವೆ ಎಂಬ ಡಂಬಾರದ ತಾಲೀಮು ನಡೆಸುತ್ತಿವೆ. ಅದಕ್ಕಾಗಿ ಇನ್ನೊಂದು ಧರ್ಮ, ಚಿಂತನೆಯ ಬಗೆಗೆ ಕೀಳುಭಾವನೆ ಮೂಡಿಸುತ್ತಿವೆ. ಇದೆಲ್ಲ ಎಂತಹ ಕೀಳು ಅಭಿರುಚಿ ಎಂಬುದು ಮೇಲ್ನೋಟಕ್ಕೇ ಅರಿವಾಗುತ್ತದೆ.
‘ಕೀರ್ತಿಕಾಮಿ’ಗಳು ಎಂಬ ಶಬ್ದವನ್ನು ವೀರಭದ್ರ ಚೆನ್ನಮಲ್ಲ ಸ್ವಾಮಿಗಳು ‘ಪಂಚಾಚಾರ್ಯರ ಪೂರ್ವಾಗ್ರಹಗಳು’ ಕೃತಿಯಲ್ಲಿ ಸರಿಯಾಗಿಯೇ ಬಳಸಿದ್ದಾರೆ.

‘ನಾನು’ ಎಂಬುದು ಈ ವಿಶ್ವದ ಭಾಗ, ಈ ನಿಸರ್ಗದ ಭಾಗ, ಈ ಸಮಾಜದ ಭಾಗ, ಮಾನವಕುಲದ ಒಂದು ಅತಿ ಚಿಕ್ಕ ಅಣುವೆಂಬುದನ್ನು ಮರತು ‘ಜಗದ್ಗುರು’ ಆಗುವುದು ಎಂತಹ ‘ಅಹಂ’ ಎಂಬುದನ್ನು ನೆನಸಿಕೊಂಡರೆ ಈ ‘ಜಗದ್ಗುರು’ಗಳ ಜ್ಞಾನ ದಾರಿದ್ರ್ಯ ಬಗೆಗ ಕನಿಕರ ಭಾವನೆ ಮೂಡುತ್ತದೆ.

ಇಂದು ಎಲ್ಲಾ ಧರ್ಮಗಳ ದೇವದೂತರು, ದೇವರ ಪ್ರತಿನಿಧಿಗಳು, ಸ್ವಯಂ ದೈವೀ ಪುರುಷರು ತಮ್ಮ ಧರ್ಮದ ತೀರಾ ಕೆಳಸ್ತರದಲ್ಲಿ ಬದುಕಿರುವ ಅಸಹಾಯಕ ಜನರ ಕಣ್ಣೀರನ್ನೂ ಗಮನಿಸದೇ ಪಲ್ಲಕ್ಕಿಗಳಲ್ಲಿ, ಆದುನಿಕ ಪಲ್ಲಕ್ಕಿಗಳಾದ ಕಾಂಟೆಸ್ಸಾ ಕಾರುಗಳಲ್ಲಿ, ಹೆಲಿಕಾಪ್ಟರ್ ಗಳಲ್ಲಿ ಮೆರೆಯುದನ್ನು ನೋಡಿದಾಗ, ತಮ್ಮ ಆತ್ಮಗಳನ್ನು ಮಾರಿಕೊಂಡದ್ದು ಗೋಚರಿಸುತ್ತದೆ. ಇನ್ನೂ ಇವರಿಗೆ ಆಧ್ಯಾತ್ಮ ಎಲ್ಲಿಂದ ಬರಬೇಕು.

ವೀರಭದ್ರ ಚೆನ್ನಮಲ್ಲ ಸ್ವಾಮಿಗಳು ಬರೆದ ಈ ಹೊತ್ತಿಗೆಯಲ್ಲಿ ಮೇಲಿನ ಆಶಯದ ಹಲವಾರು ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಪ್ರಶ್ನೆಗಳನ್ನು ‘ಜಗದ್ಗುರು’ಗಳಂತೂ ಕೇಳಿಸಿಕೊಳ್ಳಲಾರರು. ಆದರೆ ತನ್ನ ದುಃಖ, ಸಂಕಟ, ನೋವುಗಳನ್ನು ನುಂಗಿಕೊಂಡು ಇವರ ಪಲ್ಲಕ್ಕಿಗಳನ್ನು ಹೊರುವ ಎಲ್ಲಾ ಧರ್ಮದ ಜನರು ಕೇಳಿಸಿಕೊಂಡರೆ ಈ ಬರಹ ಸಾರ್ಥಕವಾದೀತು.

ಈ ಕೃತಿವು ‘ಅನು ಪ್ರಕಾಸನ’ದ ‘ಅಭಿಮನ್ಯು ಬಿ.ಎನ್.ರಮೇಶ್’ರು ಪ್ರಕಾಶಿಸಿದ್ದಾರೆ. ಈ ಕೃತಿಗೆ ರಂಜಾನ್ ದರ್ಗಾರವರ ಮುನ್ನುಡಿ ಇದೆ. ಎಸ್.ವೈ.ಗುರುಶಾಂತರ ಬೆನ್ನುಡಿ ಇದೆ. ಸಕಾಲಿಕವಾಗಿ ಸಿದ್ದನಗೌಡ ಪಾಟೀಲರ ಬರಹವಿದೆ. ಹೀಗೆಯೇ ನಾಲ್ಕಾರು ಪ್ರಗತಿಪರರ ಬರಹಗಳಿವೆ.
‌ ‌‌‌‌‌‌‌‌‌ ‌–

ಕೆ.ಶಿವು.ಲಕ್ಕಣ್ಣವರ

2 thoughts on “ಪಂಚಾಚಾರ್ಯರ ಪೂರ್ವಾಗ್ರಹಗಳು !

Leave a Reply

Your email address will not be published.

error: Content is protected !!