*ಸ್ತ್ರೀ_ಕುಲೋದ್ದಾರಕ ಬಸವಣ್ಣನವರು*
ಈ ಸಮಾಜದಲ್ಲಿ ಹೆಣ್ಣು ಅಂದರೆ ಹುಣ್ಣು ಅಂತ ತಿಳಿದ್ದರು ಮನುಪದ್ದತಿಗೊಳಾಗಿದ್ದವಳು ದೇವದಾಸಿ ಪದ್ದತಿ ಸತಿಹಗಮ ಪದ್ದತಿ ಬಾಲ್ಯವಿವಾಹ ಪದ್ದತಿ ವೈದಿಕ ವರ್ಣಾಶ್ರಮ ಪದ್ದತಿ ಸ್ತ್ರೀ ಆಗುವ ಅಸಮಾನತೆ ಶೋಷಣೆ ಲಿಂಗತಾರತಮ್ಯ ಅವಳನ್ನು ಅಸ್ಪೃಶ್ಯತಯಾಗಿ ಕಾಣುವ ರೀತಿ.ಹೆಣ್ಣನ್ನು ಒಂದು ವಸ್ತುವಾಗಿ ನೋಡಿದ್ದರು ಅವಳನ್ನು ತಮ್ಮ ಸುಖಕ್ಕಾಗಿ ಕೆಲಸ ಕಾರ್ಯಕ್ಕಾಗಿ ಮಾತ್ರ ಉಪಯೋಗಿಸಿದ್ದರು ಹೆಣ್ಣು ಅಂದರೆ ನಾಲ್ಕು ಗೊಡೆಗೆ ಮಾತ್ರ ಸೀಮಿತ ಅವಳು ಮಕ್ಕಳನ್ನು ಹೆರುವ ಒಂದು ಯಂತ್ರ ಅಂತ ತಿಳಿದ್ದರು.
ಹೀಗಿರುವಾಗ ಮೊಟ್ಟ ಮೊದಲಬಾರಿಗೆ ಈ ಜಗತ್ತಿನಲ್ಲಿ ಸ್ತ್ರೀ ಆಗುವ ಅನ್ಯಾಯದ ವಿರುದ್ದ
ಬಹುದೊಡ್ಡ ಕ್ರಾಂತಿಯನ್ನು ಮಾಡಿದ್ದವರು ಅಪ್ಪ ಗುರು ಬಸವಣ್ಣವರು..
ಅನುಭವ ಮಂಟಪದ ಸ್ಥಾಪಿಸುವುದರ ಜೊತಗೆ ಅಲ್ಲಿ ಕೊಡ ಸ್ತ್ರೀ ಸಮಾನವಾದ ಸ್ಥಾನ ಮಾನವನ್ನು ಕೊಟ್ಟು ಅವಳು ಪುರುಷಷ್ಟೇ ಸರಿಸಮಾನಳು ಎಂದು ಹೇಳಿದ್ದರು.
ಹನ್ನೆರಡನೆಯ ಶತಮಾನದಲ್ಲಿ ಅಪ್ಪ ಬಸವರಾಜ ಹನ್ನೆರಡು ಸಾವಿರ ವೇಶಷ್ಯರ ಮನ ಪರಿವರ್ತನೆ ಮಾಡಿ ಅವರಿಗೆಲ್ಲ ಹೊಸ ಬದುಕನ್ನು ಕಟ್ಟಿ ಕೊಟ್ಟು ಅವರಲ್ಲಿ ಆತ್ಮ ಚೈತನ್ಯ ಶಕ್ತಿ ಸ್ಪೊರ್ತಿ ನೀಡಿ ಅವರ ಬಾಳಿನ ಬೆಳಕಾಗಿ ಅವರನೆಲ್ಲ ಶರಣೆಯರನ್ನಾಗಿ ಮಾಡಿದ್ದವರು ಅಪ್ಪ ಬಸವತಂದೆ.
ಹನ್ನೆರಡನೆಯ ಶತಮಾನದಲ್ಲಿ ಸ್ತ್ರೀ ಸ್ವಾತಂತ್ರ್ಯ ಕೊಡುವ ಮೂಲಕ ಅನುಭವ ಮಂಟಪದಲ್ಲಿ ಎಲ್ಲಾ ಚರ್ಚೆಯಲ್ಲಿ ಭಾಗಿಯಾಗುವ ತಮ್ಮ ಅನುಭಾವನ್ನು ಹಂಚಿಕೊಳ್ಳುವ ಸಮಾನ ಅವಕಾಶವನ್ನು ನೀಡಿ ಅವರಿಗು ಕೊಡ ವಚನ ಬರೆಯುಲು ಹೊಸದಾರಿನ್ನಾಗಿ ಮಾಡಿಕೊಟ್ಟರು.
ಹೆಣ್ಣನ್ನು ಕೀಳವಾಗಿ ನೋಡಿದ್ದ ಈ ಸಮಾಜದಲ್ಲಿ ಶರಣರು ಅವಳನ್ನು ತಾಯಿಯಂತೆ ಪೊಜಿಸಿ ಗೌರವಿಸಿ ಅವಳನ್ನು ಉನ್ನತ ಸ್ಥಾನದಲ್ಲಿ ಇಟ್ಟರು.
ಹೆಣ್ಣು ಹೆಣ್ಣಲ್ಲ ಹೆಣ್ಣು ರಾಕ್ಷಿಸಿಯಲ್ಲ ಹೆಣ್ಣು ಸಾಕ್ಷತ ಕಪಿಲಸಿದ್ದಮಲ್ಲಿಕಾರ್ಜುನ ಎಂದು ಬಸವಾದಿ ಶಿವಶರಣರು ಹೆಣ್ಣಿಗೆ ದೈವತ್ವ್ ಪಟ್ಟವನ್ನು ಕಟ್ಟಿದ್ದರು ಅವಳಲ್ಲೊ ಆತ್ಮ ಚೈತನ್ಯ ವಿದೆ ಅವಳು ಪುರುಷಷ್ಟೇ ಸಮಾನಳು ಎಂದು ಹೇಳಿ ಹೆಣ್ಣಿನ ನಿಲುವಿಗೆ ಹೊಸ ನಾಂದಿ ಹಾಡಿದ್ದರು.
ಹೆಣ್ಣು ಅಸ್ಪೃಶ್ಯಳಲ್ಲ ಅವಳ ಮುಟ್ಟಾಗುವಿಕೆ ಇದು ನೈಸರ್ಗಿವಾದ ಕ್ರೀಯೆ ಅವಳಲ್ಲಿ ಯಾವುದೇ ಮುಟ್ಟು ತಟ್ಟುಗಳಿಲ್ಲ “ಹೊಲೆಗಂಡಲ್ಲದೆ ಪಿಂಡದ ನೆಲಗಾಶ್ರಯವಿಲ್ಲ. ಎಂದು ಅವಳನ್ನು ಸೊತಕ ಪಾತಗಳಿಂದ ದೊರಮಾಡಿದ್ದರು.
ಅವಳಿಗೊ ಕೊಡ ಇಷ್ಟ ಲಿಂಗ ದೀಕ್ಷೆಯನ್ನು ಕೊಟ್ಟರು.
ಆತ್ಮಕ್ಕೆ ಲಿಂಗಬೇಧವಿಲ್ಲ :
ಮೊಲೆ ಮುಡಿ ಬಂದಡೆ ಹೆಣ್ಣೆಂಬರು
ಗಡ್ಡ ಕಾಸೆ ಬಂದಡೆ ಗಂಡೆಂಬರು ನಡುವೆ ಸುಳಿವ ಆತ್ಮ ಹೆಣ್ಣು ಅಲ್ಲ ಗಂಡೊ ಅಲ್ಲ ಅಂತ ಹೇಳಿದ್ದರು.
ಮಾಯೆ ಅಂದರು ಆದರೆ ಹೆಣ್ಣು ಹೊನ್ನು ಮಣ್ಣು ಮಾಯೆಯಲ್ಲ ಮನದ ಮಂದನ ಆಸೆ ಮಾಯೆ ಅಂತ ಹೇಳಿ ಹಣ್ಣಿಗೆ ಹೊಸ ಚೈತನ್ಯವನ್ನು ತುಂಬಿದವರು ಶರಣರು.
ಹಡಪದ ಅಪ್ಪನವರ ಪತ್ನಿ ಲಿಂಗಮ್ಮತಾಯಿ ಅವರ ಹೇಳತ್ತಾರೆ
” ಕನಿಷ್ಟ ದಲ್ಲಿ ಹುಟ್ಟಿದೆ ಉತ್ತಮದಲ್ಲಿ ಬೆಳದೆಸತ್ಯ ಶರಣರ ಪಾದವಿಡಿದೆ ಆ ಶರಣರ ಪಾದವಿಡು ಗುರು ಕಂಡೆ ಲಿಂಗವಕಂಡೆ ಜಂಗಮ ಕಂಡೆ ಪಾದೋದಕವ ಕಂಡೆ ಪ್ರಸಾದವ ಕಂಡೆ
ಇಂತಿವರ ಕಂಡೆನ್ನ ಕತ್ತಲೆ ಹರಿಯಲೊಡನೆ ಮಂಗಳದ ಮಹಾಬೆಳಕಿನೊಳಗಡೆ ಸುಖಿಯಾದೆನಯ್ಯಾ ಅಪ್ಪನಪ್ರೀಯ ಚೆನ್ನಬಸವಣ್ಣ.
ಹೀಗೆ ಮೂವತೈದು ಶಿವ ಶರಣೆಯರು ವಚನಗಳನ್ನು ಬರೆದ್ದಿದ್ದು ಅವರ ಪ್ರತಿಯೊಂದು ವಚನಗಳು ಅವರ ನಿಲುವ ಸತ್ಯ ಅನುಭವ ನೆಡೆದು ಬಂದ ಸಂದರ್ಭ ತಿಳಿಯಬಹುದು.
ಹೆಣ್ಣು ಗಂಡು ಸರಿಸಮಾನರು ಎಂದು ಹೇಳಿ ಅಪ್ಪಬಸವರಾಜರು ಶರಣರೆಲ್ಲರು ಸತಿ ಲಿಂಗವೇ ಪತಿಯೆಂದು ಹೇಳಿ ಕಲ್ಯಾಣರಾಜ್ಯವನ್ನು ಕಟ್ಟಿದ್ದರು.
ಅಕ್ಕಮಾಹದೇವಿ ಅಕ್ಕಮ್ಮ ಅಮುಗೆರಾಯಮ್ಮ ಆಯ್ದಕ್ಕಿ ಲಕ್ಕಮ್ಮ ಕಾಳವ್ವೆ ಸೊಳೆಸಂಕವ್ವ ಮುಕ್ತಾಯಕ್ಕ ರೇಚವ್ವೆ ಸೋಮಮ್ಮವ್ವ ವೀರಮ್ಮ ದುಗ್ಗಳೆ ನಾಗಲಾಂಬಿಕೆ ಗುಡ್ಡವ್ವೆ ಬೊಂತಾದೇವಿ ರೇಕಮ್ಮ ಸತ್ಯಕ್ಕ ಲಿಂಗಮ್ಮತಾಯಿ. ಈ ದಿನ ಆ ಎಲ್ಲ ತಾಯಿಯಂದಿರನ್ನು ನೆನೆಯುತ್ತಾ
ಅವರ ಕಟ್ಡಿದ ಕಲ್ಯಾಣ ರಾಜ್ಯ ವನ್ನು ನಾವೆಲ್ಲರೂ ಕೊಡಿ ಕಟ್ಟುವ ನಿಲುವನ್ನು ಹೊಂದೊನಾ.
O ಶೃತಿ ಅಜ್ಜು ಆಲದಕಟ್ಟಿ
ಎಸ್. ಎಸ್ ಗುಡಸ.
ಬೈಲಹೊಂಗಲ
(ಬೆಳಗಾವಿ)